ಪ್ರತಿಯೊಬ್ಬರೂ ಶರಣರ ತತ್ವಾದರ್ಶ ಅಳವಡಿಸಿಕೊಳ್ಳಲಿ

NRD VACHANAMRUTA
Published on

ನರಗುಂದ: ಹನ್ನೆರಡನೇ ಶತಮಾನದಲ್ಲಿ ಶಿವಶರಣರು ನೀಡಿದ ಆದರ್ಶಗಳು ಬಹಳ ಉನ್ನತವಾಗಿದ್ದು, ಅಂತಹ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಕ ಪ್ರವೀಣ ಕುಲಕರ್ಣಿ ಹೇಳಿದರು.

ಶ್ರಾವಣ ಮಾಸದ ಅಂಗವಾಗಿ ಪಟ್ಟಣದ ಅಧ್ಯಾಪಕನಗರ ಬಡಾವಣೆಯ ಶ್ರೀರಾಮ ಸೊಸೈಟಿಯಲ್ಲಿ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆಯಿಂದ ಬುಧವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ವಚನಾಮೃತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೀವನವೆಂದರೆ ಕೇವಲ ಆಸ್ತಿ ಮಾಡಿ ಸುಖಮಯ ಬದುಕು ನಡೆಸುವುದಲ್ಲ. ಸಾಮರಸ್ಯದ ಬದುಕಿಗಾಗಿ ಕಷ್ಟ-ಸುಖಗಳೊಂದಿಗೆ ಸಂಸ್ಕಾರಯುತ ಜೀವನ ನಡೆಸಬೇಕು ಎಂದರು.

ಶಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ. ಮಣ್ಣೂರಮಠ, ನಿವೃತ್ತ ಪ್ರಾಚಾರ್ಯ ಸಿ.ಎಸ್. ಸಾಲೂಟಗಿಮಠ ಮಾತನಾಡಿದರು. ಮಂಗಳಾ ಪಾಟೀಲ, ಜ್ಯೋತಿ ಯಳ್ಳೂರ, ವಿದ್ಯಾ ಸುಳ್ಳದ, ಕದಳಿ ಮಹಿಳಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷೆ ಸುಕನ್ಯಾ ಸಾಲಿ, ಡಿ.ಆರ್. ಗದ್ದನಕೇರಿ, ಗಂಗಮ್ಮ ಪಾಟೀಲ, ಟಿ.ಆರ್. ಉಳ್ಳೇಗಡ್ಡಿ, ಬಿ.ಎಂ. ಅಳಗವಾಡಿ, ವಿ.ಎನ್. ಕೊಳ್ಳಿಯವರ, ಅಜ್ಜಪ್ಪ ಹೌದಕ್ಕನವರ, ಮಂಜುನಾಥ ಘಾಳಿ, ಬಸವರಾಜ ಕ್ಯಾರಕೊಪ್ಪ, ಶಿವಲೀಲಾ ಹಿರೇಮಠ, ಮಂಜುಳಾ ಅಸುಂಡಿ, ಸಾವಿತ್ರಿ ಅಪ್ರೋಜಿ, ಎಸ್.ಎಸ್. ಪೂಜಾರ, ನಿರ್ಮಲಾ ಪಾಟೀಲ, ಇತರರು ಉಪಸ್ಥಿತರಿದ್ದರು. ಎಸ್.ಎಸ್. ಪೂಜಾರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net