ಪ್ರತಿಯೊಬ್ಬರೂ ಶಿವಾಜಿ ಆದರ್ಶ ಅಳವಡಿಸಿಕೊಳ್ಳಲಿ

MUL SANMAN
Published on

ಮುಳಗುಂದ: ಛತ್ರಪತಿ ಶಿವಾಜಿ ಮಹಾರಾಜದ ಜಯಂತಿ ನಿಮಿತ್ತ ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯ ಹಾಗೂ ಕ್ಷತ್ರೀಯ ಮರಾಠ ಸಂಘದ ವತಿಯಿಂದ ಬುಧವಾರ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಸ್ಥಳೀಯ ಕ್ಷತ್ರೀಯ ಮರಾಠ ಸಂಘದ ಅಧ್ಯಕ್ಷ ವೈ.ಕೆ. ಶಿರಹಟ್ಟಿ, ಮಾತನಾಡಿ, ಶಿವಾಜಿ ಮಹಾರಾಜರು ದೇಶದ ಹಿಂದು ಸಂಸ್ಕೃತಿ, ಸಂಪ್ರದಾಯ ರಕ್ಷಣೆಗೆ ತಮ್ಮ ಜೀವವನ್ನೇ ಮುಡುಪಾಗಿಟ್ಟವರು. ಎಲ್ಲರನ್ನೂ ಸಹೋದರತ್ವ, ಸಮಾನತೆ, ಸಂಹಿಷ್ಣುತೆಯಿಂದ ನಡೆಸಿಕೊಂಡಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.

ಪಪಂ ಅಧ್ಯಕ್ಷೆ ಯಲ್ಲವ್ವ ಕವಲೂರ, ಉಪಾಧ್ಯಕ್ಷೆ ಅನಸೂಯಾ ಸೋಮಗೇರಿ, ಸದಸ್ಯರಾದ ಬಿ.ಎಸ್. ಹಾರೋಗೇರಿ, ಪಾರವ್ವ ಅಳ್ಳಣ್ಣವರ, ನೀಲವ್ವ ಅಸುಂಡಿ, ಚಂಪಾವತಿ ಗುಳೇದ, ಮುದಕಪ್ಪ ಬಡಿಗೇರ, ಪರಸಣ್ಣ ಕಳ್ಳಿಮನಿ, ತಿರಕಪ್ಪ ಸಂಭೋಜಿ, ಬಿ.ಎಲ್. ಜಾಧವ, ಮಂಜುನಾಥ ಆರೇರ, ಮಾರುತಿ ಜಾಧವ ಹಾಗೂ ಮರಾಠ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net