

ಹುಬ್ಬಳ್ಳಿ: ಪ್ರತಿಯೊಬ್ಬರೂ ದೇಶಭಕ್ತಿಯನ್ನು ಬೆಳೆಸಿಕೊಂಡು ಮನೆಮನೆಯಲ್ಲಿ ದೀಪಾವಳಿ ಹಬ್ಬದಂತೆ ಸ್ವಾತಂತ್ರ್ಯೊತ್ಸವ ಆಚರಿಸಬೇಕು ಎಂದು ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪೊ›. ಎಸ್.ಕೆ. ಆದಪ್ಪನವರ ಹೇಳಿದರು.
ನಗರದ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ರತ್ನಪಾಲ ಎ. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯ ಬಗ್ಗೆ ಜನಪದ ಹಾಡುಗಳ ಮೂಲಕ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ್ಕಾಗಿ ಹೋರಾಡಿದ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮೈಲಾರ ಮಹಾದೇವಪ್ಪ, ವಿಷ್ಣುಕಾಂತ ತಾಂಬೆ, ರಮೇಶ ನರಗುಂದ ಇವರ ಬಗ್ಗೆ ಹೇಳಿದರು.
ಆರ್.ಟಿ. ತವನಪ್ಪನವರ ಸ್ವಾತಂತ್ರ್ಯೊತ್ಸವದ ಮಹತ್ವ ತಿಳಿಸಿದರು. ಜಾನಪದ ವಿಶ್ವವಿದ್ಯಾನಿಲಯದ ಕನ್ನಡ ಜನಪದ ಶಿಕ್ಷಕ ಇಮಾಮಸಾಬ್ ವಲ್ಲೆಪ್ಪನವರ ಮಾತನಾಡಿದರು. ವೆಂಕೋಸ್ ಭಾಂಡಗೆ ಅವರ ಜೀವನ ಸಾಧನೆಯ ಬಗ್ಗೆ ಉಪನ್ಯಾಸಕಿ ಹೇಮಾವತಿ ವಿ. ಉಪನ್ಯಾಸ ನೀಡಿದರು.
ಪ್ರಾಚಾರ್ಯ ಲೋಹಿತ ಸರ್ಜನ್, ಪದ್ಮಾವತಿ ದಯನ್ನವರ, ಲಕ್ಷ್ಮೀ ಗುರವ, ಭಾಗ್ಯಶ್ರೀ ಆನಂದ , ಹರ್ಷ ಆದಪ್ಪನವರ, ದ್ಯಾಮಪ್ಪ ಪೂಜಾರ, ನಿಂಗಪ್ಪ ದೊಡ್ಡ ಪೂಜಾರ ಇತರರು ಇದ್ದರು. ವಿಸ್ಮಿತಾ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಅಭೀಷೇಕ ಹಂಡಗಿ ಸ್ವಾಗತಿಸಿದರು. ಜಯಶ್ರೀ ಮುಗಳಿ ನಿರೂಪಿಸಿದರು. ಅನಿತಾ ಕೊನೇರಿ ವಂದಿಸಿದರು.