ಪ್ರತಿ ಪ್ರಜೆ ದೇಶ ರಕ್ಷಣೆಗೆ ಮುಂದಾಗಲಿ

26 vikram 13
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾರ್ಗಿಲ್ ದೇಶದ ಮುಕುಟಪ್ರಾಯವಾಗಿ ಕಂಗೊಳಿಸಿದ ಪ್ರದೇಶ. ಈ ಪ್ರದೇಶದ ಮೇಲೆ ವೈರಿಯ ದಾಳಿ ಅತ್ಯಂತ ಶೋಚನೀಯ. ಕಾರ್ಗಿಲ್ ಕದನದಲ್ಲಿ ಭಾರತೀಯ ಸೇನೆಯ ಕೆಚ್ಚೆದೆಯ ಹೋರಾಟದ ಫಲವೇ ಕಾರ್ಗಿಲ್ ವಿಜಯೋತ್ಸವ ಎಂದು ಮಾಜಿ ಸೈನಿಕ ಮೇಜರ್​ ಸಿದ್ದಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ 2 ರೀತಿಯ ಶತ್ರುಗಳಿರುತ್ತಾರೆ. ಗಡಿಯಲ್ಲಿ ತೊಂದರೆ ಕೊಡುವವರು ಹಾಗೂ ದೇಶದೊಳಗೆ ಭಯೋತ್ಪಾದನೆ ಹುಟ್ಟು ಹಾಕುವವರು. ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಸ್ಥಳಿಯರೇ ಗುರುತಿಸಿ ಕಾನೂನಿನ ವಶಕ್ಕೆ ಒಪ್ಪಿಸಬೇಕು. ಪ್ರತಿಯೊಬ್ಬರೂ ದೇಶದ ರಕ್ಷಣೆಗೆ ತಮ್ಮದೇ ಆದ ಕೆಲಸ ಮಾಡಬೇಕು. ಸೇನೆಯಲ್ಲಿ ಶಿಸ್ತೇ ಜೀವಾಳ. ಅದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಗಿಲ್ ವಿಜಯೋತ್ಸವ ಕುರಿತು ವೀಡಿಯೋ ಪ್ರದಶಿರ್ಸಲಾಯಿತು. ಶಾಲೆಯ ಎನ್​ಸಿಸಿ ಕೆಡೆಟ್​ಗಳು ವೀರ ಯೋಧರ ಭಾವಚಿತ್ರಗಳಿಗೆ ನಮನ ಸಲ್ಲಿಸಿದರು.
ಶಾಲೆ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ, ಪ್ರಾಂಶುಪಾಲೆ ಡಾ. ಅನಿತಾ ರೈ, ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು. ಸುನಿಲ ಶಿರಾಲಿ ಸ್ವಾಗತಿಸಿದರು. ಸ್ವಪ್ನಿಲ್​ ಚಕ್ರವರ್ತಿ ನಿರೂಪಿಸಿದರು. ತ್ರಿಶಾರ ನಂಜವಾಡೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net