ನಿವೃತ್ತಿ ನಂತರ ನೌಕರರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ

07Kush06 (1)
ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಕುಶಾಲನಗರದ ಗೌಡ ಸಮಾಜ ಸಭಾಂಗಣದಲ್ಲಿ ಪುಲಿಯಂಡ ಚೆಂಗಪ್ಪ ಬಹುಮಾನ ವಿತರಿಸಿದರು. ಎಸ್.ಎಸ್.ನಾಗರಾಜ್, ಈರಪ್ಪಗೌಡ, ಗುಡ್ಡಪ್ಪ, ಮುಕುಂದ, ಅಶೋಕ, ಸುಬ್ರಮಣಿ ಇದ್ದರು.
Published on

ಕುಶಾಲನಗರ: ನೌಕರರು ನಿವೃತ್ತಿ ನಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಆರೋಗ್ಯ ಹೊಂದಬಹುದು ಎಂದು ನಿವೃತ್ತ ನೌಕರರ ಕೂಟದ ಅಧ್ಯಕ್ಷ ಪುಲಿಯಂಡ ಚೆಂಗಪ್ಪ ಹೇಳಿದರು.

ಗೌಡ ಸಮಾಜ ಸಭಾಂಗಣದಲ್ಲಿ ಮಂಗಳವಾರ ಕುಶಾಲನಗರದ ನಿವೃತ್ತ ನೌಕರರ ಕೂಟದಿಂದ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಎಷ್ಟೇ ಬಲಾಢ್ಯರಾಗಿದ್ದರೂ ಆರೋಗ್ಯ ಕೈಕೊಟ್ಟರೆ ಎಲ್ಲವೂ ಶೂನ್ಯ. ಕುಟುಂಬಸ್ಥರು, ಹಿರಿಯರು ಹಾಗೂ ಸ್ನೇಹಿತರೊಂದಿಗೆ ಕೆಲಕಾಲ ವಿಶ್ರಾಂತಿ ಪಡೆಬೇಕು ಅಥವಾ ಯಾವುದೋ ಒಂದು ಕೆಲಸದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.

ವಾರ್ಷಿಕ ಮಹಾಸಭೆ ನೆಪದಲ್ಲಿ ಅರ್ಧ ದಿನವಾದರೂ ಸಂತೋಷದಿಂದ ಕಾಲ ಕಳೆಯುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೂಟದ ಸದಸ್ಯರಿಗೆ ವಿವಿಧ ರೀತಿಯ ಕ್ರೀಡೆಗಳನ್ನು ಆಯೋಜಿಸಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ನೌಕರರ ಕೂಟದ ಕಾರ್ಯದರ್ಶಿ ಎಸ್.ಎಸ್.ನಾಗರಾಜ್, ಉಪಾಧ್ಯಕ್ಷ ಈರಪ್ಪ ಗೌಡ,ನಿರ್ದೇಶಕರಾದ ಗುಡ್ಡಪ್ಪ, ಮುಕುಂದ, ಅಶೋಕ, ಸುಬ್ರಮಣಿ, ರಾಧಾ, ಜಾನವ್ವಿ, ಸೀತಾ ರಾಮರೈ ಮುಂತಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net