ಸಾಧನೆ ಶಿಖರ ಏರಲು ಶಿಕ್ಷಣ ಬಳಕೆಯಾಗಲಿ

Let education be used to reach the peak of achievement.
ವಿಜಯಪುರದ ನಾಗರಾಳೆ ಪಬ್ಲಿಕ್ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಮಲ್ಲಿಕಾರ್ಜುನ ಲೋಣಿ ಉದ್ಘಾಟಿಸಿದರು. ತನುಜಾ ನಾಗರಾಳೆ, ಪ್ರೇಮಾನಂದ ಬಿರಾದಾರ, ವಿಜಯಕುಮಾರ ಅಜೂರ ಮತ್ತಿತರರಿದ್ದಾರೆ.
Published on

ವಿಜಯಪುರ: ಮಕ್ಕಳು ಕೇವಲ ಅಂಕ ಗಳಿಕೆಗೆ ಬೆನ್ನು ಬೀಳದೆ ಪರಿಪೂರ್ಣ ಅಧ್ಯಯನ ಕೈಗೊಳ್ಳಲು ಮುಂದಾಗಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಸಲಹೆ ನೀಡಿದರು.

ನಗರದ ಗಚ್ಚಿನಕಟ್ಟಿ ಕಾಲನಿಯ ನಾಗರಾಳೆ ಶಿಕ್ಷಣ ಸಂಸ್ಥೆಯ ನಾಗರಾಳೆ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 24ನೇ ವಾರ್ಷಿಕ ಸ್ನೇಹ ಸಮ್ಮೇಳನ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣವನ್ನು ಕೇವಲ ಪರೀಕ್ಷೆ ದೃಷ್ಟಿಯಿಂದ ಕಲಿಯದೆ ಸಾಧನೆ ಶಿಖರವನ್ನು ಏರಲು ಕಲಿಯಬೇಕು ಎಂದು ಸಲಹೆ ನೀಡಿದರು.

ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿ, ಪೋಷಕರು ಸಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಶ್ರಮಿಸಬೇಕಾಗಿದೆ. ಮಕ್ಕಳು ಸತತ ಅಧ್ಯಯನದಿಂದಲೇ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎನ್ನುವುದನ್ನು ಅರಿತುಕೊಳ್ಳಬೇಕು. ವಿದ್ಯೆ ಒಮ್ಮೆ ಕಲಿತರೆ ಅದನ್ನು ನಮ್ಮಿಂದ ಯಾರೂ ವಶಪಡಿಸಿಕೊಳ್ಳಲಾಗುವುದಿಲ್ಲ. ಜೀವನ ಪರ್ಯಂತ ನಮ್ಮಲ್ಲಿಯೇ ಇರುತ್ತದೆ ಎಂದರು.

ಜಿ.ಪಂ. ಅಧಿಕಾರಿ ವಿಜಯಕುಮಾರ ಅಜೂರ, ಅಮರನಾಥ ಪುಠಾಣಿ, ಪಾಲಿಕೆ ಸದಸ್ಯೆ ಎಸ್.ಎಸ್. ಕುಮಶಿ, ಅಶೋಕ ಜುಗತಿ ಇದ್ದರು. ಪ್ರಾಚಾರ್ಯೆ ತನುಜಾ ನಾಗರಾಳೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net