ಶಿಕ್ಷಣ ಮೌಲ್ಯ ರೂಢಿಸುವ ತಪಸ್ಸಾಗಲಿ

Let education be a penance that establishes value
Give priority to value based education
Published on

ವಿಜಯಪುರ: ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ತಂದೆ&ತಾಯಿ ಕಲಿಸುವ ಸಂಸ್ಕಾರ ಪಡೆದು ಯಶಸ್ಸನ್ನು ಸಾಧಿಸಬೇಕು. ಶಿಕ್ಷಣದ ಪದವಿಗಿಂತ ಬದುಕಿನ ಮೌಲ್ಯ ಗಳಿಸುವುದನ್ನು ರೂಢಿ ಮಾಡಿಕೊಳ್ಳಬೇಕೆಂದು ಎಕ್ಸಲಂಟ್​ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ. ಕೆ.ಎಸ್​., ಹೇಳಿದರು.

ಇಲ್ಲಿನ ಆದರ್ಶನಗರದ ಎಕ್ಸಲಂಟ್​ ಕೋಚಿಂಗ್​ ಕ್ಲಾಸಿಸ್​ನಲ್ಲಿ ಶನಿವಾರ ನಡೆದ ಬೇಸಿಗೆ ತರಬೇತಿ ವರ್ಗಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಶಿಕ್ಷಣವು ಕೇವಲ ಪದವಿ ಸಂಗ್ರಹಿಸುವ ಮಾರ್ಗವಾಗದೇ ಬದುಕಿನಲ್ಲಿ ಮೌಲ್ಯಗಳನ್ನು ರೂಢಿಸುವ ತಪಸ್ಸಾಗಬೇಕು.

ಲ್ಲದೆ, ಭವಿಷ್ಯದ ಬಗ್ಗೆ ರ್ನಿದಿಷ್ಟ ಗುರಿ, ಶಿಸ್ತು ಮತ್ತು ಸಂಯಮಶೀಲದಿಂದ ಓದುವ ಮೂಲಕ ಸುಂದರ ಬದುಕು ರೂಪಿಸಿಕೊಳ್ಳುವಂತೆ ಕರೆ ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ವಿ.ಡಿ. ಮಾದನಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಋಣಾತ್ಮಕ ಆಲೋಚನೆಗಳನ್ನು ಬದಿಗೊತ್ತಿ, ಶ್ರದ್ಧೆ ಮತ್ತು ಪ್ರಾಮಾಣಿಕತೆ ರೂಢಿಸಿಕೊಳ್ಳುವ ಮುಖೇನ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಸಕಾರತ್ಮಕ ಯೋಚನೆಗಳಿಂದ ಕಲಿಕೆಯಲ್ಲಿನ ಭಾವನಾತ್ಮಕ ತೊಡಕು ತಡೆದು ಓದಿನ ವೇಗವನ್ನು ಸುಧಾರಿಸಬಹುದು.

ಪ್ರತಿ ನಡೆಯಲ್ಲೂ ತಾಳ್ಮೆಯಿಂದ ಎದುರಿಸುವ ಮೂಲಕ ಸರ್ವರ ಗೌರವಕ್ಕೆ ಪಾತ್ರರಾಗಬೇಕೆಂದು ಹೇಳಿದರು.

ಎಕ್ಸಲಂಟ್​ ಸಂಸ್ಥೆಯ ಗೌರವ ಸದಸ್ಯ ರಾಜಶೇಖರ ಕೌಲಗಿ ಮಾತನಾಡಿ, ನಿರಂತರ ಓದಿನ ಮೂಲಕ ವಿಷಯದ ಮೇಲೆ ಪ್ರಭುತ್ವ ಸಾಧಿಸಲು ಸಹಕಾರಿಯಾಗಿದೆ. ಜ್ಚಾನಾರ್ಜನೆ ಜತೆಗೆ ಉತ್ತಮ ಆರೋಗ್ಯ ಸಂಪಾದಿಸಲು ಪೌಷ್ಠಿಕಯುಕ್ತ ಆಹಾರ, ನಿಯಮಿತ ವ್ಯಾಯಾಮ ಮತ್ತು ಉತ್ತಮ ಅಭಿರುಚಿಗಳನ್ನು ಅಳವಡಿಕೊಳ್ಳಬೇಕೆಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಸಕ್ಸಲಂಟ್​ ಸಂಸ್ಥೆ ಸಂಸ್ಥಾಪಕ ಬಸವರಾಜ ಕೌಲಗಿ, ಅತಿಥಿ ಉಮಾ .ಎಸ್​. ಶಾಹಾಬಾದಿ ಪ್ರಾಸ್ತಾವಿಕ ಮಾತನಾಡಿದರು. ವಿವಿಧ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಮುಖ್ಯಗುರು ಎಂ.ಐ. ಬಿರಾದಾರ, ಶಾಲಾ ಸಿಬ್ಬಂದಿ, ಕೋಚಿಂಗ್​ ಕ್ಲಾಸಿಸ್​ನ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತಿತರರಿದ್ದರು.
ಎಸ್​.ವೈ. ಬಿರಾದಾರ ಸ್ವಾಗತಿಸಿ ಪರಿಚಯಿಸಿದರು, ಪಿ.ಬಿ. ಖೇಡಗಿ ನಿರೂಪಿಸಿದರು. ರಾಜೇಶ್ವರಿ ಬಿ. ಅಸ್ಕಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net