ಶಿಕ್ಷಣ, ಸಮಾನತೆ ಸರ್ವರಿಗೂ ಸಿಗುವಂತಾಗಲಿ

15kkr1(8-24
ಕಿಕ್ಕೇರಿ ಕೆಪಿಎಸ್ ಶಾಲಾವರಣದಲ್ಲಿ ಗುರುವಾರ ಜರುಗಿದ 78ನೇ ಸ್ವಾತಂತ್ರೃ ದಿನಾಚರಣೆಯಲ್ಲಿ ಕೆಪಿಎಸ್ ಶಾಲಾ ಮಕ್ಕಳು ಆಕರ್ಷಕ ನೃತ್ಯ ಪ್ರದರ್ಶಿಸಿದರು.
Published on

ಕಿಕ್ಕೇರಿ : ದೇಶದ ಸಮಗ್ರ ಅಭಿವೃದ್ಧಿಗೆ ಶಿಕ್ಷಣ, ಸಮಾನತೆ ಪ್ರಬಲ ಅಸ್ತ್ರವಾಗಬೇಕು ಎಂದು ಕೆಪಿಎಸ್ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ತಿಳಿಸಿದರು.
ಇಲ್ಲಿನ ಕೆಪಿಎಸ್ ಶಾಲಾವರಣದಲ್ಲಿ ಗುರುವಾರ ಜರುಗಿದ 78ನೇ ಸ್ವಾತಂತ್ರುೃತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರ ಖಾಸಗೀಕರಣವಾಗದೆ ದುರ್ಬಲರಿಗೆ ಆಸರೆಯಾದಲ್ಲಿ ಮಾತ್ರ ದೇಶದ ಆರ್ಥಿಕ ಸಂಪತ್ತು ವೃದ್ಧಿಸಲಿದೆ ಎಂದರು.
ಕೆಪಿಸಿಸಿ ಸದಸ್ಯ ಸುರೇಶ್ ಮಾತನಾಡಿ, ದೇಶಕ್ಕೆ ಪ್ರಾಣತೆತ್ತ ಮಹನೀಯರ ಜೀವನ ಚರಿತ್ರೆ, ಆದರ್ಶ ಕಥೆಗಳು ಭವಿಷ್ಯದ ಮಕ್ಕಳಿಗೆ ಮೊದಲು ಪರಿಚಯವಾಗಬೇಕು. ಸ್ವಾತಂತ್ರ್ಯಕ್ಕಾಗಿ ಕಿಚ್ಚು ಎಬ್ಬಿಸಿದ ಮಹಾನೀಯರ ಶಕ್ತಿಯಿಂದ ಬ್ರಿಟಿಷರೆ ಎದುರಿ ನಡುಗಿ ಹೋಗುವಂತಾಯಿತು. ಹುತಾತ್ಮರಾದ ಪುಣ್ಯಭೂಮಿಗಳು ಜತನವಾಗಲಿ. ಶಿಕ್ಷಣದಲ್ಲಿ ರಾಜಕೀಯ ಬೆರೆಸಬಾರದು. ಎಳೆಯ ಮನಸ್ಸಿನಲ್ಲಿ ಶಿಸ್ತು, ಶ್ರಮ, ಸಂಯಮ, ಸಹನೆ, ವಿಶ್ವಭ್ರಾತೃತ್ವ ಮನೋಭಾವ ಮೂಡುವ ಪರಿಸರ ಸೃಷ್ಟಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಕೆಪಿಎಸ್ ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ ಶಾಲೆ, ನರ್ಸರಿ ವಿಭಾಗ, ರೋಹಿತ್ ಕಾನ್ವೆಂಟ್, ಕೇಂಬ್ರಿಡ್ಜ್ ಶಾಲೆ, ನವೀನ, ವಿನಯ್ ಕಾನ್ವೆಂಟ್, ರಾಯಲ್, ದ್ರೋಣಾಲಯ, ಹೊಯ್ಸಳ ಮತ್ತಿತರ ಶಾಲೆ ಮಕ್ಕಳು ತ್ರಿವರ್ಣ ಧ್ವಜ ಹಿಡಿದು ರಾಷ್ಟ್ರ ನಾಯಕ ಸ್ಮರಣೆ, ಜೈಕಾರ ಹಾಕುತ್ತ ಆಕರ್ಷಕ ಪಥಸಂಚಲನ ನಡೆಸಿದರು.
ವಿವಿಧ ಶಾಲಾ ಮಕ್ಕಳು ದೇಶಭಕ್ತಿ ಗೀತೆಯ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳಿಂದ ಮಕ್ಕಳಿಗೆ ಸಿಹಿ ವಿತರಣೆ ನಡೆಯಿತು. ಗ್ರಾಪಂ ಉಪಾಧ್ಯಕ್ಷೆ ಜ್ಯೋತಿ ದಯಾನಂದ್, ಪ್ರಾಂಶುಪಾಲ ದೊರೆಸ್ವಾಮಿ, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಜೆಡಿಎಸ್ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಮಾಜಿ ಯೋಧ ಲೋಕೇಶ್, ಮುಖಂಡರಾದ ಶೇಖರ್, ಸುರೇಶ್‌ಬಾಬು, ಎಲ್.ಪಿ. ನಂಜಪ್ಪ, ಮಹದೇವ, ವಕೀಲ ಎಲ್.ಕೆ. ಕಾಳೇಗೌಡ, ರೈತಸಂಘ ನಾರಾಯಣಸ್ವಾಮಿ, ಜವರಾಯಿಗೌಡ, ಸಾಸಲು ನಂಜಪ್ಪ, ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ಎನ್‌ಸಿಸಿ ಅಧಿಕಾರಿ ಎಸ್.ಎಂ. ಬಸವರಾಜು, ಶಿಕ್ಷಕರಾದ ಮಂಜೇಗೌಡ, ಬಿ.ಎನ್. ಪರಶಿವಮೂರ್ತಿ, ಪಾರ್ವತಿ, ಭಾರತಿ, ಪೌರಕಾರ್ಮಿಕ ನಾಗರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net