'ದಸರಾ ಅವೈಜ್ಞಾನಿಕ ವೆಚ್ಚದ ಬಗ್ಗೆಯೂ ಮಾತಾಡಲಿ'

Published on

ಮೈಸೂರು: ಮಹಿಷ ದಸರಾ ವಿರುದ್ಧ ಧ್ವನಿ ಎತ್ತುತ್ತಿರುವ ಸಂಸದ ಪ್ರತಾಪಸಿಂಹ, ದಸರೆಯಲ್ಲಿ ನಡೆಯುವ ಅವೈಜ್ಞಾನಿಕ ವೆಚ್ಚದ ಬಗ್ಗೆಯೂ ಮಾತನಾಡಲಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ಮಹಿಷ ದಸರಾ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿವೆ. ಆದರೆ ವಾಸ್ತವದಲ್ಲಿ ಶಾಂತಿಯುತ ಜೀವನ ಕಟ್ಟಿಕೊಂಡಿರುವ ಸಾಂಸ್ಕೃತಿಕ ನಗರಿಯ ಜನತೆಗೆ ಭಯದ ವಾತಾವಾರಣ ಸೃಷ್ಟಿಸುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮಹೋತ್ಸವದ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ದುಂದುವೆಚ್ಚ ಮಾಡಲಾಗುತ್ತಿದೆ. ಪ್ರವಾಸಿಗರ ಸುಲಿಗೆ, ಚಾಮುಂಡಿಬೆಟ್ಟ ಮತ್ತು ತಪ್ಪಲಿನ ಪಾರ್ಕಿಂಗ್, ಫಲಪುಷ್ಪ ಪ್ರದರ್ಶನದ ಪ್ರವೇಶ ಶುಲ್ಕ ಮತ್ತು ಟೆಂಡರ್ ಹೆಸರಿನಲ್ಲಿ ಲೂಟಿ ಮಾಡುತ್ತಿರುವ ಬಗ್ಗೆ ಮಾತನಾಡಿ ಎಂದು ಒತ್ತಾಯಿಸಿದರು.
ದಸರಾ ಗೋಲ್ಡ್‌ಪಾಸ್ ಉಳ್ಳವರ ಪಾಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವ ಸಂಸದ ಪ್ರತಾಪಸಿಂಹ ಹಾಗೂ ಮಹೇಶ್ ಚಂದ್ರಗುರು ಮೇಲೆ ಕಾನೂನು ಕ್ರಮ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಪಕ್ಷದ ಪದಾಧಿಕಾರಿಗಳಾದ ಮಾ.ಸ.ಪ್ರವೀಣ್, ರಾಜೇಗೌಡ, ಎಸ್.ನಾಗೇಂದ್ರ, ಸುಂದರ್, ಪ್ರೇಮ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net