ನಾಟಕ ಕಲೆ ಪ್ರೋತ್ಸಾಹಿಸುವ ಕೆಲಸವಾಗಲಿ

LXR NATAK
Published on

ಲಕ್ಷೆ್ಮೕಶ್ವರ: ಮೊಬೈಲ್​ಫೋನ್, ಟಿವಿಯ ಆಧುನಿಕ ಭರಾಟೆಯಲ್ಲಿ ಬದುಕಿನ ಮೌಲ್ಯಗಳನ್ನು ತಿಳಿಸುವ ನಾಟಕ ಕಲೆ ತೆರೆಮರೆಗೆ ಸರಿಯುತ್ತಿದ್ದು, ಜೀವಂತ ನಾಟಕ ಕಲೆಯನ್ನು ಉಳಿಸಿ-ಬೆಳೆಸಿ-ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿ ಎಲ್ಲರದ್ದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಹೇಳಿದರು.

ಪಟ್ಟಣದಲ್ಲಿ ರಾಣೆಬೆನ್ನೂರಿನ ಮಂಜುನಾಥ ನಾಟ್ಯ ಸಂಘದಿಂದ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನದಲ್ಲಿ ಅವರು ಮಾತನಾಡಿದರು. ವೃತ್ತಿರಂಗಭೂಮಿ ಕಲಾವಿದರು ಅಪ್ಪಟ ಕಲಾವಿದರಾಗಿದ್ದು, ವೇದಿಕೆಯಲ್ಲಿ ಪ್ರೇಕ್ಷಕರ ಮನ ಸೆಳೆಯುವ ಸಾಮರ್ಥ್ಯ ಹೊಂದಿರುತ್ತಾರೆ. ತೆರೆಯ ಹಿಂದಿನ ಕಲಾವಿದರ ಬದುಕು ಅತ್ಯಂತ ಕಷ್ಟದಾಯಕವಾಗಿರುತ್ತದೆ. ಸರ್ಕಾರಗಳು ರಂಗಭೂಮಿಯ ಅಭಿವೃದ್ಧಿಗೆ ಸಹಾಯ, ಸಹಕಾರ ನೀಡಬೇಕು. ರಂಗಭೂಮಿ ಕಲಾವಿದರಿಗೆ ಗೌರವ ನೀಡುವ ಕಾರ್ಯವಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಜುನಾಥ ನಾಟ್ಯ ಸಂಘದ ಮಾಲೀಕ ಮಲ್ಲಿಕಾರ್ಜುನ ಚಿಕ್ಕಮಠ ಮಾತನಾಡಿ, ‘ಜನರು ನಾಟಕಗಳನ್ನು ನೋಡುವ ಮೂಲಕ ಬಡ ಕಲಾವಿದರ ಹಾಗೂ ನಾಟಕ ಕಂಪನಿಗಳ ಪೋಷಣೆ ಮಾಡಬೇಕು’ ಎಂದರು.

ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ, ಮಲ್ಲಿಕಾರ್ಜುನ ಕಳಸಾಪುರ, ದಿಗಂಬರ ಪೂಜಾರ, ಶಿವಲಿಂಗಯ್ಯ ಹೊತಗಿಮಠ, ಸೋಮಣ್ಣ ಯತ್ನಳ್ಳಿ, ಕರಿಯಪ್ಪ ಶಿರಹಟ್ಟಿ, ಸಿದ್ದು ದುರಗಣ್ಣವರ, ಸುದರ್ಶನ ಚಿಕ್ಕಮಠ, ಮಹಾಂತೇಶ ಚಿಕ್ಕಮಠ, ನಿವೇದಿತಾ ಚಿಕ್ಕಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net