ವೈದ್ಯರು ಎಐ ತಂತ್ರಜ್ಞಾನ ಕಲಿಕೆಗೆ ಮುಂದಾಗಲಿ

20
Published on

ಮೈಸೂರು: ವೈದ್ಯರು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಲ್ಯಾರಿಂಗಾಲಜಿ ಹಾಗೂ ವಾಯ್ಸ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಡಾ.ಸಚಿನ್‌ಗಾಂಧಿ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರ ‘ಲ್ಯಾರಿಂಗಾಲಜಿ ಸಮ್ಮೇಳನ-2024’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ವ್ಯಕ್ತಿಗೆ ಚಿಕಿತ್ಸೆ ನಡೆಸುವ ಸಮಯದಲ್ಲಿ ನಾವು ನಿಖರವಾಗಿ ಕೆಲಸ ಮಾಡಿದ್ದೇವೆ ಎಂದುಕೊಳ್ಳುತ್ತೇವೆ. ಆದರೆ ಈಗ ಎಐ ತಂತ್ರಜ್ಞಾನ ಉಪಯೋಗಿಸಿಕೊಂಡರೆ, ನಿಗದಿತ ಭಾಗವನ್ನು ನೀವು ಇನ್ನೂ ಎರಡು ಇಂಚು ಕತ್ತರಿಸಬೇಕು ಎಂದು ಹೇಳುತ್ತದೆ. ಆದ್ದರಿಂದ ವೈದ್ಯರು ಹೊಸ ತಂತ್ರಜ್ಞಾನ ಬಗ್ಗೆ ಕಲಿಯಲು ಆಸಕ್ತಿ ವಹಿಸಬೇಕು. ಅಲ್ಲದೆ ಅದನ್ನು ನಿರಾಕರಿಸುವ ಪ್ರವೃತ್ತಿಯನ್ನು ಬಿಟ್ಟು ಬಿಡಬೇಕು. ನಾವು ಅಮೆರಿಕದವರು, ನಾವು ಹಳೆಯ ಸಂಪ್ರದಾಯ ಪಾಲಿಸುವವರು, ಹೊಸ ತಂತ್ರಜ್ಞಾನವೆಲ್ಲ ಈಗಿನ ತಲೆಮಾರಿಗೆ ಹೊಂದಾಣಿಕೆಯಾಗುತ್ತದೆ ಎನ್ನಬಾರದು. ಹೊಸತನ್ನು ಕುತೂಹಲದಿಂದ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ನಮ್ಮ ಸಂಸ್ಥೆಯ ವತಿಯಿಂದ ಹೊಸದಾಗಿ ಆಧ್ಯಾತ್ಮಿಕ ತರಗತಿಗಳನ್ನು ಹಾಗೂ ವ್ಯಕ್ತಿಗಳ ನಡುವೆ ಬಾಂಧವ್ಯ ವೃದ್ಧಿಸುವಂತಹ ಕೋರ್ಸ್‌ಗಳನ್ನು ಆನ್‌ಲೈನ್ ಮೂಲಕ ಪ್ರಾರಂಭಿಸಿದ್ದೇವೆ. ಪ್ರತಿ ಮೂರು ತಿಂಗಳಿಗೊಮ್ಮೆ ಚಿಕಾಗೋ ವಿಶ್ವವಿದ್ಯಾನಿಲಯದ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮ ನಡೆಸುತ್ತೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net