ಲಾಭಾಂಶದಿಂದ ಸಾಮಾನ್ಯರಿಗೆ ಅನುಕೂಲವಾಗಲಿ

vemghal
Published on

ವೇಮಗಲ್​: ಸಹಕಾರ ಸಂದಲ್ಲಿ ನೀವು ನೀಡುವ ಸಾಲಗಳು ಮರುಪಾವತಿಯಾಗಬೇಕು. ಅದರೊಂದಿಗೆ ಸಂದ ಲಾಭಾಂಶ ಷೇರುದಾರರಿಗೆ, ರೈತರಿಗೆ, ಬಡವರಿಗೆ ಮತ್ತು ಮಹಿಳೆಯರಿಗೆ ದೊರೆಯುವಂತೆ ಸಹಕಾರಿ ಸಂ ಶ್ರಮಿಸಬೇಕು ಎಂದು ಮಾಜಿ ಸಭಾಪತಿ ವಿ.ಆರ್​.ಸುದರ್ಶನ್​ ಹೇಳಿದರು.

ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ದಿ.ವಿ.ಎಸ್​.ರಾಮಶೆಟ್ಟಿ ಅವರ 48ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ಕೇಂದ್ರ ಸರ್ಕಾರವೇ ಪಂಚಾಯಿತಿಗೊಂದು ಸಹಕಾರ ಸಂ ತೆರಿಯಿರಿ ಎಂದು ಹೇಳಿತ್ತಿದೆ. ಅದರಂತೆ ತೆರೆದಾಗ ಆ ಭಾಗದವರಿಗೆ ಕೆಲಸವೂ ಸಿಗುತ್ತದೆ, ರೈತರಿಗೆ ಅನುಕೂಲವಾಗುತ್ತದೆ. ವೇಮಗಲ್​ ಸಹಕಾರ ಸಂದಲ್ಲಿ 34 ಹಳ್ಳಿಯವರಿದ್ದಾರೆ. ಬೆಳಮಾನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಅಂಟಿಕೊಂಡಿದೆ. ಅವರಿಗೆ ವೇಮಗಲ್​ ಸುಮಾರು 12 ಕಿ.ಮೀ. ದೂರ ಆಗುತ್ತದೆ. ಕುರುಗಲ್​ ಗ್ರಾಪಂ ದಾಟಿ ವೇಮಗಲ್​ಗೆ ಬರಬೇಕು. ಅಲ್ಲಿಯೇ

ಒಂದು ಸೊಸೈಟಿ ತೆರೆದಾಗ ಯಾವುದೇ ತೊಂದರೆ ಆಗುವುದಿಲ್ಲ. ಅಭಿವೃದ್ಧಿ ಜತೆಗೆ ಅವಕಾಶವೂ ಸಿಗುತ್ತದೆ. ಇದಕ್ಕೆ ಬೆಳಮಾನಹಳ್ಳಿಯ ಸದಸ್ಯರು

ಚರ್ಚಿಸಿದರೆ ಉತ್ತಮ ಎಂದರು.

ಸಹಕಾರ ಸಂದ ಅಧ್ಯಕ್ಷ ಶೆಟ್ಟಳ್ಳಿ ನಂಜುಂಡಪ್ಪ ಮಾತನಾಡಿ, ದಿ.ವಿ.ಎಸ್​.ರಾಮಶೆಟ್ಟಿ ಮತ್ತು ಸಿ.ಬೈರೇಗೌಡರ ದೂರದೃಷ್ಟಿಯೇ ವೇಮಗಲ್​ ಅಭಿವೃದ್ಧಿಗೆ ಸಾ. ವೇಮಗಲ್​ ಜನತೆ ಇಂದಿಗೂ ಅವರು ಹಾಕಿ ಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಸ್ಮರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net