ಅಭಿವೃದ್ಧಿ ಮತ್ತು ಬೆಳವಣಿಗೆ ಜೀವನದ ಗುರಿಯಾಗಲಿ

26bhr 1 (1)
ಬಾಳೆಹೊನ್ನೂರಲ್ಲಿ ಆಯೋಜಿಸಿದ್ದ ಜೇಸಿಐ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನವನ್ನು ವಲಯಾಧ್ಯಕ್ಷೆ ಆಶಾ ಜೈನ್ ಉದ್ಘಾಟಿಸಿದರು. ರೇಖೇಶ್ ಶರ್ಮಾ, ಚರಣ್ ರಾಜ್, ಎನ್.ಶಶಿಧರ್, ಯಶಸ್ವಿನಿ, ರಂಗಸ್ವಾಮಿ ಇದ್ದರು.
Published on

ಬಾಳೆಹೊನ್ನೂರು:ಅಭಿವೃದ್ಧಿ ಮತ್ತು ಬೆಳವಣಿಗೆ ಎಲ್ಲರ ಜೀವನದ ಪ್ರಮುಖ ಗುರಿಯಾಗಿರಬೇಕು ಎಂದು ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ರೇಖೇಶ್ ಶರ್ಮಾ ಹೇಳಿದರು.
ನಾರಾಯಣಗುರು ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜೇಸಿಐ ವಲಯ 14ರ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ, ಜೇಸಿಐ ವಿಶ್ವದ ಏಕೈಕ ವ್ಯಕ್ತಿತ್ವ ವಿಕಸನ ಸಂಸ್ಥೆ. ಯುವಜನರಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವದ ಗುಣ ಬೆಳೆಸುವ ಕೆಲಸ ಮಾಡುತ್ತಿದೆ. ರಾಜಕೀಯ ನಾಯಕರು, ಪ್ರತಿಷ್ಠಿತ ಉದ್ಯಮಿಗಳು, ಗಣ್ಯರು, ಸಚಿವರು ಅನೇಕ ತರಬೇತಿ ಪಡೆದು ಯಶಸ್ವಿಯಾಗಿದ್ದಾರೆ ಎಂದರು.
ಜೇಸಿಐ ಸಂಸ್ಥೆ ಕೇವಲ ವ್ಯಕ್ತಿತ್ವ ವಿಕಸನ ಮಾತ್ರವಲ್ಲದೇ, ಸಮಾಜ ಸೇವೆಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಭಾರತದಲ್ಲಿ ಜೇಸಿಐ ಸಂಸ್ಥೆ ಆರಂಭವಾಗಿ 75ವಸಂತಗಳು ಪೂರೈಸಿದ್ದು, ಈ ವರ್ಷಜೇಸಿಐ ವಿಶೇಷ ಆಚರಣೆಗಳ ಮೂಲಕ ಸಂಭ್ರಮಿಸುತ್ತಿದೆ. ವಿಶೇಷ ಶಾಶ್ವತ ಕಾರ್ಯಕ್ರಮಗಳನ್ನು ಸಮಾಜಕ್ಕೆ ಮಾದರಿಯಾಗಿ ನೀಡುತ್ತಿದೆ. ಯುವ ಜನರನ್ನು ಹೆಚ್ಚು ಸಂಖ್ಯೆಯಲ್ಲಿ ಜೇಸಿಐಗೆ ಸೇರಿಸುವುದರೊಂದಿಗೆ ಹಿರಿಯ ಜೇಸಿಐ ಸದಸ್ಯರಿಗೂ ವಿಶೇಷ ಗೌರವ ನೀಡುತ್ತಿದೆ ಎಂದರು.
ಅಭಿವೃದ್ಧಿ, ಬೆಳವಣಿಗೆ ಸಮ್ಮೇಳನದ ಅಧ್ಯಕ್ಷ ಚರಣ್‌ರಾಜ್, ನಿಕಟಪೂರ್ವ ವಲಯಾಧ್ಯಕ್ಷೆ ಯಶಸ್ವಿನಿ, ವಲಯ ಕಾರ್ಯದರ್ಶಿ ಮಾಯಾ ಗಿರೀಶ್, ಜೇಸಿ ಅಲ್ಯುಮಿನಿ ಕ್ಲಬ್ ಅಧ್ಯಕ್ಷ ರಂಗಸ್ವಾಮಿ, ಜಿ ಅಂಡ್ ಡಿ ವಿಭಾಗದ ವಿಶೇಷ ಅಧಿಕಾರಿ ರಾಜು ಮೂಡಿಗೆರೆ, ರಾಷ್ಟ್ರೀಯ ಅಧ್ಯಕ್ಷರ ಸಮನ್ವಯಾಧಿಕಾರಿ ದಿಲಾನ್ ಚೆಂಗಪ್ಪ, ಸಮ್ಮೇಳನದ ನಿರ್ದೇಶಕ ಕೆ.ಎಂ.ರಾಘವೇಂದ್ರ, ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಅಜಿತ್, ಕಾರ್ಯದರ್ಶಿ ಎಚ್.ಟಿ.ಶೃಜಿತ್ ಹುಯಿಗೆರೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net