ಸಂಸ್ಕಾರ, ಸಂಸ್ಕೃತಿ ನಮ್ಮ ಜೀವನದ ಪದ್ಧತಿಯಾಗಲಿ

22 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸದಾಚಾರ, ಸಂಪನ್ನತೆ, ಸಂಸ್ಕಾರ, ಸಂಸ್ಕೃತಿ ನಮ್ಮ ನಿತ್ಯ ಬದುಕಾಬೇಕು. ಚಾರಿತ್ರ್ಯದಿಂದ ಬದುಕಬೇಕು. ರಾಷ್ಟ್ರ ಪ್ರೇಮ, ಗುರು ಹಿರಿಯಲ್ಲಿ, ಗೌರವ ಹೊಂದಿರಬೇಕು. ಅಂದಾಗಲೇ ನಮ್ಮ ಬದುಕಿಗೆ ಬೆಲೆ ಸಿಗಲಿದೆ ಎಂದು ಹಿರಿಯ ವಿದ್ವಾಂಸ ಪಂ. ಪ್ರಹ್ಲಾದಾಚಾರ್ಯ ಗಲಗಲಿ ಹೇಳಿದರು.

ನಗರದ ಕೆಲಗೇರಿ ರಸ್ತೆಯ ಮಾಧ್ವ ವಿದ್ಯಾಪಿಠದ ಸಂಶೋಧನಾ ಸಂಸ್ಥೆ ಅಡಿ ಏರ್ಪಡಿಸಿದ್ದ ಧಾರ್ಮಿಕ ಶಿಕ್ಷಣ ಶಿಬಿರ ಸಪ್ತಾಹ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾಲಕರು, ಗುರುಗಳು ಮಕ್ಕಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಬೇಕು ಎಂದರು.

ಡಾ. ಹ.ವೆಂ. ಕಾಖಂಡಿಕಿ ಮಾತನಾಡಿ, ಮಾಧ್ವ ವಿದ್ಯಾಪಿಠದ ಸಂಶೋಧನಾ ಸಂಸ್ಥೆಯ ಕಾರ್ಯ ಸ್ತುತ್ಯಾರ್ಹ. ಸಂಸ್ಕೃತ ಶ್ಲೋಕಗಳನ್ನು, ಸರಳ ಶಬ್ದಗಳನ್ನು, ಮಂತ್ರಗಳನ್ನು ಶ್ರೇಷ್ಠ ವಿದ್ವಾಂಸರು ಮಕ್ಕಳಿಗೆ ತಿಳಿಯುವ ಹಾಗೆ ಹೇಳಿಕೊಡುವುದರಿಂದ ಮಾತೃಭಾಷೆ ಕನ್ನಡದ ಜತೆ ಇನ್ನೊಂದು ಭಾಷೆಯ ಪರಿಚಯವಾಗುತ್ತದೆ ಎಂದರು.

ಶಿಬಿರದ ನಿರ್ದೇಶಕರಾಗಿ ವಿದ್ವಾಂಸ ಪಂ. ಬಿ.ಆರ್​. ವೆಂಕಟೇಶಾಚಾರ್ಯ ಮಕ್ಕಳಿಗೆ ಪಾಠ ಮಾಡಿದರು. ಪಂ.ಸುರೇಶಾಚಾರ್ಯ ರಾಯಚೂರ ಮಾತನಾಡಿದರು. ಮಕ್ಕಳಿಗೆ ಪ್ರಶಸ್ತಿ ಪತ್ರ, ಬಹುಮಾನ ನೀಡಲಾಯಿತು.

ಕೆರೂರ ಕೇಶವಾಚಾರ್ಯರು, ಪ್ರಾಣೇಶಾಚಾರ್ಯ ಅವಧಾನಿ, ಸತ್ಯಧಿರಾಚಾರ್ಯ, ಡಾ. ಪ್ರಮೋದಾಚಾರ್ಯ ಚಂದಿ, ಶ್ರೀನಿಧಿ ಆಚಾರ್ಯ, ಪಿ.ಆರ್​. ಕುಲಕರ್ಣಿ, ಡಾ.ಅಶೋಕ ಚಚಡಿ, ನಾಗರಾಜ ಕೊಪ್ಪರ, ವಸಂತ ದೇಸಾಯಿ, ರಮೇಶ ಕಾಖಂಡಿಕಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net