ಸಂಸ್ಕೃತಿ, ಪರಂಪರೆ ಮೈಗೂಡಿಸಿಕೊಳ್ಳಲಿ

10TLR1
Published on

ತಲ್ಲೂರ: ಪ್ರತಿಯೊಬ್ಬರೂ ಸಂಸ್ಕೃತಿ, ಪರಂಪರೆ ಹಾಗೂ ಆಚಾರ&ವಿಚಾರ ಮೈಗೂಡಿಸಿಕೊಂಡು ಸಮಾಜದಲ್ಲಿ ಮಾದರಿ ಬದುಕು ಸಾಗಿಸಬೇಕು ಎಂದು ಸ್ಥಳಿಯ ತೋರಗಲ್ಲಮಠದ ದೀಪಕಸ್ವಾಮಿ ಹೇಳಿದರು.

ಗ್ರಾಮದಲ್ಲಿ ನೂಲ ಹುಣ್ಣಿಮೆ, ಶ್ರಾವಣ ಮಾಸ ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿ, ಎಲ್ಲರಿಗೂ ಧಾರ್ಮಿಕ ಸಂಸ್ಕಾರ ಅಗತ್ಯವಿದೆ ಎಂದರು. ನಂದಿಮಠದ ಬಾಳಯ್ಯಜ್ಜ ಮಾತನಾಡಿ, ಮನುಷ್ಯ ದಾನ ಧರ್ಮ, ಧಾರ್ಮಿಕ ಹಾಗೂ ಕಾರ್ಯಗಳ ಮೂಲಕ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.

ಆನಿಗೋಳ, ಬೈಲಹೊಂಗಲದ ಪುರವಂತರು ಶಸ್ತ್ರಪವಾಡ ಜರುಗಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು. ಸಾಯಿ ಪಿಕೆಪಿಎಸ್​ ಅಧ್ಯ ಮಹಾರುದ್ರಪ್ಪ ಉಪ್ಪಿನ, ಮುಖಂಡ ಶಂಕರಗೌಡ ಪಾಟೀಲ, ಈರಣ್ಣ ಹುದ್ದಾರ, ಅರ್ಚಕ ಬಸಯ್ಯ ಮಠಪತಿ, ಪ್ರಸನ್ನಶಾಸ್ತ್ರಿ, ಶಿವಪ್ಪ ಹೂಗಾರ, ಜಗದೀಶ ಹೊಸಮಠ, ಬಸವರಾಜ ಬಡಿಗೇರ, ಬಾಳಯ್ಯ ಮಾಸ್ತಮರಡಿ, ಉಮೇಶ ಹೊಸವಾಳ, ಮಲ್ಲಪ್ಪ ಯರಗಟ್ಟಿ, ಪ್ರಕಾಶ ಯರಗಟ್ಟಿ, ಪಂಚಲಿಂಗಪ್ಪ ಕಾಶಪ್ಪನವರ, ಬಸವರಾಜ ಸರದಾರ, ನಿಂಗಪ್ಪ ದೊಡವಾಡ, ಮಹಾದೇವ ಉಪ್ಪಿನ, ವಿನಯ ಕರಿಕಟ್ಟಿ, ಮಲ್ಲಯ್ಯ ಮಠಪತಿ, ಎಂ.ವಿ.ಉಪ್ಪಿನ, ಧರ್ಮ ದುಂಡನಕೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net