ದೇಶದಿಂದ ಕರೊನಾ ತೊಲಗಲಿ, ಸಚಿವ ಕೆ.ಗೋಪಾಲಯ್ಯ ಪ್ರಾರ್ಥನೆ ಹಿಪ್ಪೆ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ

09 Nela Ph 02 Minister Gopalaiah Visit (1)
Published on

ನೆಲಮಂಗಲ: ದೇಶವೇ ಕರೊನಾ ವೈರಸ್‌ನಿಂದಾಗಿ ಸಂಕಷ್ಟ ಅನುಭವಿಸುತ್ತಿದೆ. ದೇವರ ಅನುಗ್ರಹದಿಂದ ಕರೊನಾಮುಕ್ತ ರಾಷ್ಟ್ರ ನಿರ್ಮಿಸುವ ಶಕ್ತಿ ದೇವರು ಕರುಣಿಸಲಿ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಪ್ರಾರ್ಥಿಸಿದರು.

ನಗರದ ಅಡೇಪೇಟೆಯಲ್ಲಿ ಜೀರ್ಣೋದ್ಧಾರಗೊಂಡ ಹಿಪ್ಪೆ ಆಂಜನೇಯ ದೇವಾಲಯ ಉದ್ಘಾಟನೆ ವಿಗ್ರಹ ಪ್ರತಿಷ್ಠಾಪನೆ ಪ್ರಯುಕ್ತ ಭಾನುವಾರ ಗಣಪತಿ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಚೀನ ಕಾಲದಿಂದಲೂ ಜನರು ದೇವರ ಮೇಲೆ ಅಪಾರವಾದ ನಂಬಿಕೆ ಇಟ್ಟಿಕೊಂಡಿದ್ದಾರೆ. ಕಾಲಕಾಲಕ್ಕೆ ಹಿರಿಯರು ನೀಡಿದ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬರ ಕರ್ತವ್ಯ. ಇಂದು ಸುಮಾರು 700 ವರ್ಷಗಳ ಇತಿಹಾಸ ಹೊಂದಿದ್ದ ಹಿಪ್ಪೆ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮಾಡಿದ್ದು, ದೇವರು ಆರೋಗ್ಯ, ಐಶ್ವರ್ಯ, ಸಕಲ ಸಂಪತ್ತು ಕರುಣಿಸಲಿ ಎಂದರು.

ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕರೊನಾ ಸೊಂಕಿಗೆ ಒಳಗಾಗಿದ್ದು, ದೇವರ ಅನುಗ್ರಹದಿಂದ ಬೇಗ ಗುಣಮುಖರಾಗಬೇಕೆಂದು ದೇವರಲ್ಲಿ ಪ್ರಾರ್ಥಿಸಿದರು.

ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಮಾತನಾಡಿ, ಭಾರತೀಯರಲ್ಲಿ ದೇವರು, ದೇವಾಲಯಗಳ ಬಗ್ಗೆ ವಿಶೇಷ ನಂಬಿಕೆ. ನಗರದಲ್ಲಿದ್ದರೂ ಹುಟ್ಟಿ ಬೆಳೆದ ಗ್ರಾಮವನ್ನು ಮರೆಯುವುದಿಲ್ಲ. ಹಳೆಯ ದೇವಾಲಯ ನವೀಕರಣದ ಜತೆಗೆ ಆಕರ್ಷಕ ಗೋಪುರ ನಿರ್ಮಾಣ ಮಾಡಲಾಗಿದೆ ಎಂದರು.

ಹಾಗೆಯೇ ಆ.10ರಂದು ಮೂಲ ಶ್ರೀ ಆಂಜನೇಯ ಸ್ವಾಮಿ ದೇವರ ಪುನಃ ಪ್ರತಿಷ್ಠಾಪನೆ ಮಾಡುವುದಾಗಿ ತಿಳಿಸಿದರು.

ಕಾರ್ಯಕ್ರಮದ ಪ್ರಯುಕ್ತ ಮಹಾಗಣಪತಿ ದೇವರಿಗೆ ಸಹಸ್ರ ಮೋದಕ ಯಾಗ ಮತ್ತು ಕಳಸಾಭಿಷೇಕ ನೆರವೇರಿಸಲಾಯಿತು.

ನಗರಸಭೆ ಸದಸ್ಯರಾದ ಗಂಗಾಧರ್‌ರಾವ್, ಪುರುಷೋತ್ತಮ್, ಹಿಪ್ಪೆ ಆಂಜನೇಯಸ್ವಾಮಿ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಎನ್.ಪುಟ್ಟರಾಜು, ಖಜಾಂಚಿ ರಮೇಶ್, ಸದಸ್ಯರಾದ ಶಿವಕುಮಾರ್, ರಾಜು, ಎನ್.ಕಾರ್ತಿಕ್, ಕಾಂತರಾಜು ಮತ್ತಿತರರು ಉಪಸ್ಥಿತರಿದರು.

ಮನೆ ಕಳೆದುಕೊಂಡವರಿಗೆ ಪರಿಹಾರ: ರಾಜ್ಯದ ಕೆಲ ಜಿಲ್ಲೆಗಳ ಜನರಿಗೆ ಅತಿವೃಷ್ಟಿಯಿಂದ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಮುಖ್ಯಮಂತ್ರಿಗಳ ಆದೇಶದಂತೆ ತಾತ್ಕಾಲಿಕ 10 ಸಾವಿರ ರೂ. ಪರಿಹಾರ ನೀಡಲಾಗಿದೆ. ಹಾಗೆಯೇ ಉಳಿದಂತೆ 3 ಹಂತದಲ್ಲಿ ಪರಿಹಾರ ನೀಡಲು ಕ್ರಮ ಕೈಗೊಂಡಿದ್ದು, ಸಂಪೂರ್ಣ ನಾಶವಾದ ಮನೆಗೆ 5 ಲಕ್ಷ ರೂ., ಸ್ವಲ್ಪ ಪ್ರಮಾಣದಲ್ಲಿ ನಾಶವಾದ 3 ಲಕ್ಷ ರೂ., ಕಡಿಮೆ ಪ್ರಮಾಣದಲ್ಲಿ ನಾಶವಾದ ಮನೆಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸಚಿವ ಸಚಿವ ಕೆ.ಗೋಪಾಲಯ್ಯ ಎಂದು ತಿಳಿಸಿದರು.

ಅತಿವೃಷ್ಟಿಗೊಳಗಾದ ಹಾಸನ ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. 800ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಳೆಗೆ ಬೆಳೆ ನಾಶವಾಗಿದ್ದು, ನಷ್ಟದ ಪಟ್ಟಿ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net