ರೈತರ ನೆರವಿಗೆ ಸಹಕಾರ ಸಂಘಗಳು ಧಾವಿಸಲಿ

17blrp3
Published on

ಬೇಲೂರು: ಮಳೆ ಇಲ್ಲದೆ ತಾಲೂಕಿನಲ್ಲಿ ರೈತರು ಬರದ ಸಂಕಷ್ಟದಲ್ಲಿದ್ದು, ಸಹಕಾರ ಸಂಘಗಳು ಅವರ ನೆರವಿಗೆ ಧಾವಿಸಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಸಲಹೆ ನೀಡಿದರು.

ಬೇಲೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಬೇಲೂರು ತಾಲೂಕಿನಲ್ಲಿ ಮಳೆ ಇಲ್ಲದೆ ಬೆಳೆ ಹಾನಿಯಾಗಿರುವ ಬಗ್ಗೆ ರೈತರ ಜಮೀನಿಗೆ ತೆರಳಿ ಪರಿಶೀಲಿಸಿ ವರದಿಯನ್ನು ಸರ್ಕಾರ ಮತ್ತು ಸಂಬಂಧಿಸಿದ ಸಚಿವರಿಗೆ ನೀಡಿದ್ದೇನೆ. ಬೇಲೂರು ಸಹ ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿದ್ದೇನೆ. ಸರ್ಕಾರ ಮತ್ತೊಮ್ಮೆ ಬೆಳೆ ಸರ್ವೇಗೆ ಅಧಿಕಾರಿಗಳನ್ನು ಕಳುಹಿಸಲಿದೆ. ಬೇಲೂರು ಕ್ಷೇತ್ರವನ್ನು ಬರ ಪಟ್ಟಿಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದರು.

ಮುಸುಕಿನ ಜೋಳ ಹಾಗೂ ರಾಗಿ ಬೆಳೆ ಹಾನಿಗೆ ಸರ್ಕಾರದಿಂದ ಪರಿಹಾರ ಕಲ್ಪಿಸಲಾಗುವುದು. ಕೃಷಿ ಇಲಾಖೆಯಿಂದ ರೈತರ ಬೆಳೆ ವಿಮೆಯಲ್ಲಿ ಸಬ್ಸಿಡಿ ಕೊಡಿಸುವುದಕ್ಕೆ ಕ್ರಮ ವಹಿಸಲಾಗುವುದು. ಜತೆಗೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಭಿವೃದ್ಧಿಗೆ ಅನುದಾನ ತರಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಹಗರೆ ಕಾಂತರಾಜು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ರಾಜಶೇಖರ್, ನಿರ್ದೇಶಕರಾದ ಬಿ.ಡಿ.ಚಂದ್ರೇಗೌಡ, ಮಲ್ಲೇಗೌಡ, ರವಿಕುಮಾರ್, ಎಸ್.ನಾಗೇಶ್, ಲಕ್ಷ್ಮಣ್, ಸೋಮೆಶ್, ಕಣಗುಪ್ಪೆ ಕುಮಾರ್, ಭಾರತೀ ಗೌಡ, ಪ್ರಿಯಾಂಕಾ, ಜಾನಕಮ್ಮ, ಮಂಜೇಗೌಡ, ಕಾರ್ಯದರ್ಶಿ ದೀಪು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net