ಕಾಫಿ ಬೆಳೆಗಾರರು ಸಂಘಟನಾತ್ಮಕವಾಗಿ ಹೋರಾಟ ಮಾಡಲಿ

ಆಲೂರು ತಾಲೂಕಿನ ಮಗ್ಗೆ ಗ್ರಾಮದಲ್ಲಿ ಕಾಫಿ ಬೆಳೆಗಾರರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಸಿಮೆಂಟ್ ಮಂಜು ಭೂಮಿ ಪೂಜೆ ನೆರವೇರಿಸಿದರು. ರವಿಕುಮಾರ್, ಚನ್ನಕೇಶವ, ನವೀನ್, ಬೋಪಣ್ಣ ಇದ್ದರು.
ಆಲೂರು ತಾಲೂಕಿನ ಮಗ್ಗೆ ಗ್ರಾಮದಲ್ಲಿ ಕಾಫಿ ಬೆಳೆಗಾರರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಸಿಮೆಂಟ್ ಮಂಜು ಭೂಮಿ ಪೂಜೆ ನೆರವೇರಿಸಿದರು. ರವಿಕುಮಾರ್, ಚನ್ನಕೇಶವ, ನವೀನ್, ಬೋಪಣ್ಣ ಇದ್ದರು.
Published on

ಆಲೂರು: ಕಾಫಿ ಬೆಳೆಗಾರರು ಕೃಷಿ ಚಟುವಟಿಕೆ ವಿಚಾರದಲ್ಲಿ ಸಂಘಟನಾತ್ಮಕವಾಗಿ ಹೋರಾಟ ಮಾಡುವ ಮೂಲಕ ಯಶಸ್ಸು ಕಾಣಬೇಕು ಎಂದು ಶಾಸಕ ಸಿಮೆಂಟ್ ಮಂಜು ಸಲಹೆ ನೀಡಿದರು.

ತಾಲೂಕಿನ ಮಗ್ಗೆ ಗ್ರಾಮದಲ್ಲಿ ಕಾಫಿ ಬೆಳೆಗಾರರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ. ನೀಡಲಾಗಿದೆ. ಈವರೆಗೆ ಕಾಫಿ ಬೆಳೆಗಾರರು ಹವಾಮಾನ ವೈಪರೀತ್ಯದಿಂದ ಹಲವು ತೊಂದರೆ ಅನುಭವಿಸಿದರು. ಪ್ರಸಕ್ತ ಸಾಲಿನಲ್ಲಿ ಕಾಫಿ ಬೀಜಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ವ್ಯಕ್ತವಾಗಿ, ಬೆಳೆಗಾರರ ಕಷ್ಟ ಅಲ್ಪಸ್ವಲ್ಪ ಪರಿಹಾರವಾಗಿದೆ. ಭೂತಾಯಿ ಎಂದಿಗೂ ತನ್ನನ್ನು ನಂಬಿದವರನ್ನು ಕೈ ಬಿಡುವುದಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಹೇಳಿದರು.

ಸಂಘದ ಆಶ್ರಯದಲ್ಲಿ ಉತ್ತಮ ಆಡಳಿತದೊಂದಿಗೆ ಚಟುವಟಿಕೆ ನಡೆಯುತ್ತಿರಬೇಕು. ಸನ್ಮಾರ್ಗದಲ್ಲಿ ಯಶಸ್ಸು ಕಾಣಲು ಸಂಘಟನೆ ಅತ್ಯಗತ್ಯ ಎಂದರು.

ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಚನ್ನಕೇಶವ, ಖಜಾಂಚಿ ನವೀನ್, ಕಾರ್ಯದರ್ಶಿ ಬೋಪಣ್ಣ, ಮಾಜಿ ಅಧ್ಯಕ್ಷರಾದ ನಂಜುಂಡಪ್ಪ, ವೀರನಂಜಪ್ಪ, ಬಿ.ಎಸ್.ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೂವಯ್ಯ, ಮುಖಂಡರಾದ ಶಶಿಧರ್, ಧರ್ಮರಾಜ್, ಅನಿಲ್, ವಿಕ್ರಮ್ ಸೇರಿದಂತೆ ಬೆಳೆಗಾರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net