ಅಡಕೆಯೊಂದಿಗೆ ಕಾಫಿ, ಕಾಳುಮೆಣಸು ಬೆಳೆಯುವಂತಾಗಲಿ

23sdp2- TMS
Published on

ಸಿದ್ದಾಪುರ: ರೈತರು ತಮ್ಮ ಅಡಕೆ ತೋಟಗಳಲ್ಲಿ ಪರ್ಯಾಯ ಬೆಳೆ ಬಗ್ಗೆ ಚಿಂತಿಸಬೇಕು. ಅಡಕೆ ಉತ್ಪನ್ನಗಳ ಜತೆ ಕಾಫಿ, ಕೊಕೋ, ಕಾಳುಮೆಣಸು ಮತ್ತಿತರ ಬೆಳೆಗಳನ್ನು ಬೆಳೆಯುವಲ್ಲಿ ಸೂಕ್ತ ಮಾಹಿತಿ- ತರಬೇತಿ ಪಡೆದುಕೊಂಡು ಕಾರ್ಯೋನ್ಮುಖರಾಗಲು ಮುಂದಾಗಬೇಕು ಎಂದು ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.


ತಾಲೂಕಿನ ಕಾನಸೂರಿನಲ್ಲಿ ಟಿಎಂಎಸ್​ನ ಕಾನಸೂರು ಶಾಖೆಯ ಸಹಕಾರಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ಗೋಪಾಲ ರಾಮಚಂದ್ರ ಹೆಗಡೆ ಮಾದ್ನಕಳ, ವಿರೂಪಾಕ್ಷ ತಿಮ್ಮಯ್ಯ ಹೆಗಡೆ ಶೀಗೇಹಳ್ಳಿ, ಸೀತಾರಾಮ ಲಕ್ಷ್ಮೀನಾರಾಯಣ ಹೆಗಡೆ ತ್ಯಾಗಲಿ, ರಾಮಪ್ಪ ಈರಪ್ಪ ನಾಯ್ಕ ಬಾಳೇಕೊಪ್ಪ, ರಾಧಾ ನಾರಾಯಣ ನಾಯ್ಕ ಹಳ್ಳಿಬೈಲ, ಶಂಕರ ಕೃಷ್ಣ ದೇವಾಡಿಗ ಮಾಸ್ತಿಜಡ್ಡಿ, ರಾಮನಾಥ ಅನಂತ ಹೆಗಡೆ ಹರೀಶಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ವಿರೂಪಾಕ್ಷ ತಿಮ್ಮಯ್ಯ ಹೆಗಡೆ ಶೀಗೇಹಳ್ಳಿ ಮಾತನಾಡಿದರು.


ಟಿಎಂಎಸ್​ನ ಉಪಾಧ್ಯಕ್ಷ ಎಂ.ಜಿ. ನಾಯ್ಕ, ವ್ಯವಸ್ಥಾಪಕ ಸತೀಶ ಹೆಗಡೆ ಹೆಗ್ಗಾರಕೈ, ನಿರ್ದೇಶಕರಾದ ಕೆ.ಕೆ. ನಾಯ್ಕ ಸುಂಕತ್ತಿ, ಜಿ.ಆರ್. ಹೆಗಡೆ ಹಳದೋಟ, ಎಲ್.ಆರ್. ಹೆಗಡೆ ಬಾಳೇಕುಳಿ, ಎಂ.ಎನ್. ಹೆಗಡೆ ತಲೆಕೆರೆ, ಪಿ.ಕೆ. ನಾಯ್ಕ ಮುಗದೂರು, ಸುಧೀರ ಗೌಡರ್ ಬಾಳೇಕುಳಿ, ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ ಹಾಗೂ ಸಲಹಾ ಸಮಿತಿ ಸದಸ್ಯರಾದ ನಾಗೇಶ ಹೆಗಡೆ ಹರೀಶಿ ಕುಂಟಗಳಲೆ, ಎಸ್.ಎನ್. ಭಟ್ಟ ಭಾಗವತ, ಎಂ.ಆರ್. ಭಟ್ಟ ತಟ್ಟಿಕೈ, ವಿನಾಯಕ ಹೆಗಡೆ ಉಪಸ್ಥಿತರಿದ್ದರು.


ನಿರ್ದೇಶಕರಾದ ಸಿ.ಎನ್. ಹೆಗಡೆ ತೆಂಗಾರಮನೆ ಸ್ವಾಗತಿಸಿದರು. ಎಸ್.ಎಲ್. ಹೆಗಡೆ ಸಾಯಿಮನೆ ವಂದಿಸಿದರು. ಜಿ.ಜಿ. ಹೆಗಡೆ ಬಾಳಗೋಡ ಹಾಗೂ ಶಾಖಾ ವ್ಯವಸ್ಥಾಪಕ ಎಸ್.ಎನ್. ಹೆಗಡೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net