ಪೌರಕಾರ್ವಿುಕರು ಆರೋಗ್ಯದ ಕಾಳಜಿ ವಹಿಸಲಿ

Felicitation to civil workers
Published on

ಹೊನ್ನಾವರ: ಪೌರಕಾರ್ವಿುಕರು ದೈಹಿಕ ಶುಚಿತ್ವದ ಕಡೆ ಹೆಚ್ಚಿನ ಮಹತ್ವವನ್ನು ನೀಡಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪೌರಕಾರ್ವಿುಕರನ್ನು ಎಲ್ಲರೂ ಗೌರವಿಸಬೇಕು ಎಂದು ಪ.ಪಂ. ಅಧ್ಯಕ್ಷ ನಾಗರಾಜ ಭಟ್ ಹೇಳಿದರು.

ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಪೌರಕಾರ್ವಿುಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪೌರಕಾರ್ವಿುಕರಿಗೆ ಸರ್ಕಾರದ ಅನೇಕ ಸೌಲಭ್ಯಗಳಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಶಿಕ್ಷಣವಂತರನ್ನಾಗಿ ಮಾಡಬೇಕು ಎಂದರು.

ಪ.ಪಂ. ಮುಖ್ಯಾಧಿಕಾರಿ ಯೇಸು ಎಸ್ ಬೆಂಗಳೂರು ಪ್ರಾಸ್ತಾವಿಕ ಮಾತನಾಡಿದರು.

ಶಿಕ್ಷಕ ಅನಿರುದ್ದ ಭಟ್ಟ ಉಪನ್ಯಾಸ ನೀಡಿದರು. ಪೌರಕಾರ್ವಿುಕರಿಗೆ, ಡ್ರೈವರ್, ಲೋಡರ್, ಸ್ವೀಪರ್​ಗಳನ್ನು ಸನ್ಮಾನಿಸಲಾಯಿತು. ಪ್ರೋತ್ಸಾಹಧನದ ಚೆಕ್ಕನ್ನು ಹಸ್ತಾಂತರಿಸಲಾಯಿತು. ವಿವಿಧ ಕ್ರೀಡಾಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪೌರಕಾರ್ವಿುಕರ ಕಾರ್ಯಗಳ ಕುರಿತು ತಯಾರಿಸಿದ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು.

ಪ.ಪಂ. ಉಪಾಧ್ಯಕ್ಷ ಸುರೇಶ ಹೊನ್ನಾವರ, ಸದಸ್ಯರಾದ ಶಿವರಾಜ ಮೇಸ್ತ, ಮಹೇಶ ಮೇಸ್ತ, ಸುಭಾಸ ಹರಿಜನ, ತಾರಾ ನಾಯ್ಕ, ನಿಶಾ ಶೇಟ, ಜೋಸ್ಪಿನ್ ಡಾಯಸ್, ಭಾಗ್ಯ ಮೇಸ್ತ, ಭಾರತಿ ಭಂಡಾರಿ, ಸುಜಾತಾ ಮೇಸ್ತ, ನಾಗರತ್ನ ಕೋನೇರಿ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net