ಕ್ರಿಯಾ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಲಿ

14-ANG-1
Published on

ಅಣ್ಣಿಗೇರಿ: ಮಕ್ಕಳು ಶಿಕ್ಷಣದ ಜತೆಗೆ ಇನ್ನಿತರ ಕ್ರಿಯಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮನೋಭಾವನೆ ರೂಪಿಸಿಕೊಳ್ಳಬೇಕು ಎಂದು ರುದ್ರಮುನೀಶ್ವರ ದಾಸೋಹ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಹೇಳಿದರು.

ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿ ಗ್ರಾಮದಲ್ಲಿ ಶ್ರೀ ಅಮೃತೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ‘ಸ್ವಚ್ಛತೆಗಾಗಿ ಯುವಜನತೆ’ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು. ಮಕ್ಕಳು ರಾಷ್ಟ್ರೀಯ ಸೇವಾ ಯೋಜನೆಯಂತಹ ಶಿಬಿರಗಳಲ್ಲಿ ಪಾಲ್ಗೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಹೋಬಳಿ ಘಟಕದ ಅಧ್ಯಕ್ಷ ವಿ.ಡಿ. ಅಂದಾನಿಗೌಡರ ಮಾತನಾಡಿ, ನಮ್ಮ ಗ್ರಾಮದಲ್ಲಿ ನೀವು ಕೈಗೊಂಡಿರುವ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸುತ್ತೇವೆ ಎಂದರು.

ಡಾ.ಎಚ್.ಬಿ. ಪೂಜಾರ ಉಪನ್ಯಾಸ ನೀಡಿದರು. ನಾಮದೇವ ಪವಾರ, ರಾಮಣ್ಣ ದೊಡ್ಡಮನಿ, ದೊಡ್ಡಫಕೀರಪ್ಪ ಗಾಣಿಗೇರ, ಎಫ್.ಎ. ಯಕ್ಲಾಸಪುರ, ಬಿ.ವೈ. ನರಗುಂದ, ಎಫ್.ಡಿ. ಜಡಿ ಇತರರಿದ್ದರು

ಗೌರಮ್ಮ ಕಟ್ಟೆಕಾರ, ಎ.ಆರ್. ಪಾಟೀಲ, ಎ.ಬಿ. ಬೆಟಸೂರ ಹಾಗೂ ಯು.ಎ. ಹಳೇಮಸೂತಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net