

ಅರಸೀಕೆರೆ: ತಾಲೂಕಿನ ದೊಡ್ಡಮೇಟಿಕುರ್ಕೆ ಬೂದಿಹಾಳ್ ವಿರಕ್ತ ಮಠದಲ್ಲಿ 16ನೇ ಸಂಕಷ್ಟಹರ ಚತುರ್ಥಿ ಪೂಜೆ ಹಾಗೂ ಸುಜ್ಞಾನ ಗೋಷ್ಠಿಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಶ್ರೀಮಠದ ಪೀಠಾಧ್ಯಕ್ಷ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿ ಸ್ವಾರ್ಥಪರ ಚಿಂತನೆ ಬೆಳೆಯದಂತೆ ನೋಡಿ ಕೊಳ್ಳುವ ಗುರುತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಜತೆಗೆ ಸಮಾಜ ಸುಧಾರಕರಾದ ಬಸವಣ್ಣ, ಸ್ವಾಮಿ ವಿವೇಕಾನಂದರಂತಹ ಅನೇಕ ಮಹಾಪುರುಷರ ಆದರ್ಶಗಳನ್ನು ಪಾಲಿಸಬೇಕು ಎಂದರು.
ಶಾಲಾ ಕೊಠಡಿ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಾದ ಹೇಮಾ ರಾಜಶೇಖರ ದಂಡಿ, ನಾಗವೇಣಿ ಶಿವಯೋಗಿ ಶಾಸ್ತ್ರಿ, ನಂಜುಂಡ ಶೆಟ್ರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಡಾಳು ಚಂದ್ರು, ಕೊಬ್ಬರಿ ವರ್ತಕರಾದ ಜಗದೀಶ್, ಚನ್ನದೇವರು ಸೇರಿದಂತೆ ಹಲವರು ಇದ್ದರು.