ಮಕ್ಕಳು ಮೈಗೂಡಿಸಿಕೊಳ್ಳಲಿ ರಾಮನ ಗುಣ: ಕೃಷ್ಣ ಮೋಹನ ಅನಿಸಿಕೆ

Bdk_Rama
Published on

ಕುಂಬಳೆ: ಶ್ರೀ ಭಾರತಿ ವಿದ್ಯಾಪೀಠ ಮುಜುಂಗಾವಿನಲ್ಲಿ ರಾಮಾಯಣ ಮಾಸಾಚರಣೆಯ ಸಮಾರೋಪ ಸಮಾರಂಭ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗೊಂದಿಗೆ ಸಂಪನ್ನಗೊಂಡಿತು. ಅತಿಥಿಗಳಾಗಿ ಆಗಮಿಸಿದ ಸಿಎ.ಕೃಷ್ಣ ಮೋಹನ ಶೇಡಿಗುಮ್ಮೆ ಮಾತನಾಡಿ, ರಾಮನ ಉತ್ತಮ ಗುಣಗಳನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು ಎಂದರು.

ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಮಕ್ಕಳಿಗೆ ಸತ್ಸಂಗದ ಅವಧಿಯಲ್ಲಿ ರಾಮಾಯಣದ ಶ್ರವಣ, ಮನನದ ಮಹತ್ವದ ಪರಿಚಯ ನೀಡಿದರು. ಆಡಳಿತ ಸಮಿತಿಯ ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಣಿ ಅಧ್ಯಕ್ಷತೆ ವಹಿಸಿದ್ದರು. ರಾಮಾಯಣ ಮಾಸಾಚರಣೆಯ ಸಲುವಾಗಿ ವಿವಿಧ ಕಾರ್ಯಕ್ರಮಗಳು ಜರುಗಿತು.

ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಕೆ, ಮುಖ್ಯಶಿಕ್ಷಕಿ ಶ್ಯಾಮ್ ಭಟ್ ದರ್ಬೆಮಾರ್ಗ, ಸಹ ಮುಖ್ಯಶಿಕ್ಷಕಿ ಚಿತ್ರಾಸರಸ್ವತಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಕುಮಾರಿ ಕನಿಹ ಸ್ವಾಗತಿಸಿ, ಶಾಶ್ವತ್ ವಂದಿಸಿದರು. ಕುಮಾರಿ ವೈಷ್ಣವಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net