ಮಕ್ಕಳಿಗೆ ಕೌಶಲಾಧಾರಿತ ಶಿಕ್ಷಣ ಸಿಗಲಿ

29MUDALGI2
Published on

ಮೂಡಲಗಿ: ವಿದ್ಯಾರ್ಥಿಗಳಿಗೆ ಕೌಶಲಾಧಾರಿತ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಧರ್ಮಟ್ಟಿ ಗ್ರಾಮದ ಶಿಕ್ಷಣ ಪ್ರಸಾರಕ ಮಂಡಳಿಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ರಾಜ್ಯಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 10ಲಕ್ಷ ರೂ. ವೆಚ್ಚದ ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣ ಪ್ರಸಾರಕ ಮಂಡಳಿ ಬಹಳ ವರ್ಷಗಳಿಂದ ಧರ್ಮಟ್ಟಿ ಹಾಗೂ ಸುತ್ತ್ತಲಿನ ಗ್ರಾಮಗಳ ರೈತಾಪಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು ಆ ಸಂಸ್ಥೆಗೆ ಅನುದಾನ ನೀಡಿರುವುದು ನನ್ನ ಸುದೈವ ಎಂದರು.

ಕಳೆದ 5 ವರ್ಷಗಳಲ್ಲಿ ಅರಬಾವಿ ವಿಧಾನಸಭಾ ಕ್ಷೇತ್ರದಲ್ಲಿ 10 ಕೋಟಿ ರೂ. ಅಧಿಕ ಅನುದಾನ ವಿನಿಯೋಗಿಸಿದ್ದೇನೆ ಎಂದರು.

ಶಿಕ್ಷಣ ಪ್ರಸಾರಕ ಮಂಡಳಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಅಮರಸಿಂಹ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಸಿಂಧೂರ ಕೊರಕಪೂಜೇರಿ, ಮನೋಹರ ಜೋಶಿ, ಶಿವರುದ್ರಪ್ಪ ಕುಂಬಾರ, ಲಕ್ಷ್ಮಣ ಪೂಜೇರಿ, ಲಕ್ಕಪ್ಪ ಪೂಜೇರಿ, ಕೆಂಚಪ್ಪ ತಿಗಡಿ, ನಿಂಗಪ್ಪ ಸನದಿ, ವಿಠ್ಠಲ ಗೌಡರ, ಲಗಮಪ್ಪ ಗೌಡರ, ಷಣ್ಮುಖ ಕುಂಬಾರ, ಶಿವಾನಂದ ಪಾಟೀಲ, ವಿಠ್ಠಲ ಪೂಜೇರಿ, ಲಕ್ಕಪ್ಪ ಪಾಟೀಲ, ಸಿದ್ದಪ್ಪ ಹಳ್ಳೂರ, ಈರಪ್ಪ ಢವಳೇಶ್ವರ, ಗುರು ಗಂಗಣ್ಣವರ, ಈಶ್ವರ ಗಾಡವಿ, ಪ್ರಾಚಾರ್ಯ ಎಸ್.ಎಸ್.ಚಿಪ್ಪಲಕಟ್ಟಿ ಸೇರಿ ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net