

ರಾಯಬಾಗ: ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಸಮಯದಲ್ಲಿ ಓದಿಗೆ ಹೆಚ್ಚಿನ ಮಹತ್ವ ಕೊಡಬೇಕೆಂದು ನಿಲಜಿ ಕೆಪಿಎಸ್ ಶಾಲೆ ಪ್ರಾಚಾರ್ಯ ಐ.ಆರ್. ನದ್ಾ ಹೇಳಿದರು.
ತಾಲೂಕಿನ ಸುಟ್ಟಟ್ಟಿಯ ಉನ್ನತೀಕರಿಸಿದ ಮುರಾರ್ಜಿ ದೇಸಾಯಿ ವಸತಿ ಶಾಲೆ ವಾರ್ಷಿಕೋತ್ಸವ ಸಮಾರಂಭ ಈಚೆಗೆ ಉದ್ಘಾಟಿಸಿ ಮಾತನಾಡಿ, ಮಕ್ಕಳು ಸರ್ಕಾರ ನೀಡುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
ವಕೀಲೆ ಸಾರಿಕಾ, ನಿಲಜಿ ಸಿಆರ್‌ಪಿ ಬಸವರಾಜ ಕಾಂಬಳೆ ಮಾತನಾಡಿ, ಎಲ್ಲರ ಸಹಕಾರ ಹಾಗೂ ಪ್ರಾಚಾರ್ಯೆ ರೇವತಿ ಪಾಟೀಲ ಪರಿಶ್ರಮದಿಂದ ಶಾಲೆಯು ಪ್ರಗತಿ ಹೊಂದಿದೆ ಎಂದರು.
ಪ್ರಾಂಶುಪಾಲೆ ರೇವತಿ, ಡಿ.ಎಸ್. ಗುಡಿಮನಿ, ರಮೇಶ ಶಿವಕ್ಕನವರ, ಶೋಭಾ ಕಾನಡೆ, ಅಶ್ವಿನಿ ಹೊನ್ನೋಲೆ, ಐ.ಎಸ್. ಪಾಟೀಲ, ಜಡ್.ಆರ್. ಮುಲ್ಲಾ, ದಾದಾ ಪಾಟೀಲ ಇದ್ದರು.