ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರಯುತ ಶಿಕ್ಷಣ ಸಿಗಲಿ

6 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರಾಚಿನ ಶಿಕ್ಷಣ ಪದ್ಧತಿಯಿಂದಲೇ ನಮ್ಮ ಭಾರತದಲ್ಲಿ ಅನೇಕ ಸಂಶೋಧನೆಗಳಾಗಿವೆ. ಬ್ರಿಟಿಷರ ಆಗಮನದಿಂದ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಅನೇಕ ಬದಲಾವಣೆಗಳಾದ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆಯು ಇಂದಿನ ಯುವ ಪೀಳಿಗೆಗೆ ಸಂಸ್ಕೃತಿ ಹಾಗೂ ಸಂಸ್ಕಾರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶಿಕ್ಷಣ ಭಾರತೀಯ ವಿಭಾಗ ಸಂಯೋಜಕ ವೀರೇಂದ್ರಗೌಡ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಸುವರ್ಣ ಎಜುಕೇಶನಲ್​ ಟ್ರಸ್ಟ್​ನ ಸುವರ್ಣ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ರಾಷ್ಟ್ರೊತ್ಥಾನ ಪರಿಷತ್​ ವತಿಯಿಂದ ಏರ್ಪಡಿಸಿದ್ದ ಭಾರತೀಯ ಸಂಸ್ಕೃತಿ ಉಳಿವಿಗಾಗಿ ನಮ್ಮೆಲ್ಲರ ಪಾತ್ರ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವ ಜನತೆ ಮೊಬೈಲ್​ನ ಅತಿಯಾದ ಬಳಕೆಯಿಂದ ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಪುಸಕ್ತಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ನಮ್ಮ ಸಂಸ್ಕೃತಿ, ಸಾಹಿತ್ಯದ ಬಗ್ಗೆ ಜ್ಞಾನ ಸಂಪಾದನೆ ಮಾಡಿಕೊಂಡು ತಮ್ಮ ವ್ಯಕ್ತಿತ್ವದಲ್ಲಿ ಆಗಾಧ ಬದಲಾವಣೆ ಮಾಡಿಕೊಳ್ಳಬಹುದಾಗಿದೆ ಎಂದರು.

ಉಪನ್ಯಾಸಕ ಪ್ರೊ. ಎನ್​.ಎಸ್​ ಸಾಲಿಮಠ ಮಾತನಾಡಿದರು. ಸುವರ್ಣ ಎಜುಕೇಶನಲ್​ ಟ್ರಸ್ಟ್​ ಅಧ್ಯಕ್ಷ ವಿಶ್ವನಾಥ ಅಮರಶೆಟ್ಟಿ, ಶಿಕ್ಷಕರು, ಇತರರು ಇದ್ದರು.

ಪ್ರಾಚಾರ್ಯ ಡಾ. ಸದ್ಗುರು ಹೆಳವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ನಿರ್ಮಲಾ ಗುರವ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net