

ಕೊಳ್ಳೇಗಾಲ : ಪಟ್ಟಣದ ವಿಸ್ಡಮ್ ಪ್ರೌಢಶಾಲೆಯಲ್ಲಿ ಶನಿವಾರ 2024-25ನೇ ಸಾಲಿನ ಶಾಲಾ ಸಂಸತ್ತಿನ ಪದ ಗ್ರಹಣ ಸಮಾರಂಭ ಆಯೋಜಿಸಲಾಗಿತ್ತು.
ವಿದ್ಯಾರ್ಥಿ ದಿಸೆಯಲ್ಲಿಯೇ ಶಾಲಾ ಮಕ್ಕಳಿಗೆ ನಾಯಕತ್ವ ಗುಣ ಹಾಗೂ ಜವಾಬ್ದಾರಿ ನಿರ್ವಹಣೆ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಶಾಲೆಯಲ್ಲಿ ಜು.12 ರಂದು ಮಕ್ಕಳ ಸಂಸತ್ ಚುನಾವಣೆ ನಡೆಸಲಾಯಿತು. ಈ ವೇಳೆ ಮಕ್ಕಳು ಇವಿಎಂ ಮೂಲಕ ಮತ ಚಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಶಾಲೆಯಲ್ಲಿ ಏರ್ಪಡಿಸಿದ್ದ ಪ್ರದಗ್ರಹಣ ಸಮಾರಂಭದಲ್ಲಿ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಉಮಾವತಿ ಮಕ್ಕಳಿಗೆ ಹಂಚಿಕೆ ಮಾಡಿದರು.
ಪಿಎಸ್‌ಐ ಉಮಾವತಿ ಮಾತನಾಡಿ, ಶಾಲಾ ಹಂತದಲ್ಲಿ ಮಕ್ಕಳಿಗೆ ನಾಯಕತ್ವ, ಜವಾ ಬ್ದಾರಿ, ಧೈರ್ಯ, ಶಿಸ್ತು ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳ ಪ್ರಾಯೋಗಿಕ ಪರಿಚಯ ಮಕ್ಕಳ ಸಂಸತ್ತಿನಿಂದ ತಿಳಿಯಲಿದೆ. ಮಕ್ಕಳು ಇಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮೊದಲು ತಮಗೆ ತಾವೇ ನಾಯಕತ್ವ ಗುಣವನ್ನು ಬೆಳೆಸಿ ಕೊಳ್ಳಬೇಕು. ಉತ್ತಮ ನಡವಳಿಕೆ ಅಳವಡಿಸಿಕೊಂಡು ಪಾಲಕರಿಗೆ, ಗುರುಗಳಿಗೆ, ಸಮಾಜಕ್ಕೆ ಗೌರವ ತರಬೇಕು. ಮಕ್ಕಳ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ವೇಳೆ, ವಿಸ್ಡಮ್ ಪ್ರೌಢಶಾಲೆಯ ಪ್ರಾಂಶುಪಾಲೆ ನಯನಾ ಕಾರಿಬೆಲ್ ಪ್ರಮಾಣ ವಚನ ಬೋಧನೆ ಮಾಡಿದರು.
ಮಕ್ಕಳ ಸಂಸತ್ತಿನ ಆಡಳಿತ ಮಂಡಳಿ: ಶಾಲೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದೀಪಶ್ರೀ, ಉಪಾಧ್ಯಕ್ಷರಾಗಿ ವಿಶಾಲ್, ಕ್ರೀಡಾ ಕಾರ್ಯದರ್ಶಿಯಾಗಿ ಮೋನಿಷಾ, ಕ್ರೀಡಾ ಜಂಟಿ ಕಾರ್ಯದರ್ಶಿಯಾಗಿ ವಿಶಾಲ್ ಅಧಿಕಾರ ಸ್ವೀಕರಿಸಿದರು. ಶಾಲೆಯ ಅಲ್ಫಾ ಕ್ಲಬ್‌ನ ನಾಯಕರಾಗಿ ಸಾರಾ, ದರ್ಶನ್, ಬೀಟಾ ಕ್ಲಬ್‌ನ ನಾಯಕರಾಗಿ ಜೋವಿಯಾ, ಅದ್ವೈತ್, ಗಾಮಾ ಕ್ಲಬ್ ನಾಯಕರಾಗಿ ದುರ್ಗಾ, ರಾಜು, ಡೆಲ್ಟಾ ಕ್ಲಬ್‌ನ ನಾಯಕರಾಗಿ ವರಲಿಕಾ, ಸಿದಾರ್ಥ್ ಅಧಿಕಾರ ಸ್ವೀಕರಿಸಿದರು.
ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುನೀಲ್, ಪ್ರಶಾಂತ್, ಶಿಕ್ಷಕರಾದ ನಂದಿನಿ, ಮಮತಾ, ಸಂಗೀತ, ನೇಹಾ, ಮಂಜುಳಾ, ಅನುಪಮಾ, ಸಿದ್ದಪ್ಪಾಜಿ, ಲಾವಣ್ಯಾ ಇದ್ದರು.