

ಅಳವಂಡಿ: ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಮತ್ತು ಪರಿಸರ ಸಂರಕ್ಷಣೆಯಲ್ಲಿ ಮಕ್ಕಳು ಪಾಲ್ಗೊಳುವಂತೆ ಪ್ರೋತ್ಸಾಹಿಸಲಾಗುವುದು ಎಂದು ಮುಖ್ಯಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ ತಿಳಿಸಿದರು. ಸಮೀಪದ ನೀರಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಸರಾ ರಜೆ ನಂತರ ಶಾಲಾ ಚಟುವಟಿಕೆಗಳ ಆರಂಭವನ್ನು ಗಿಡ ನೆಡುವ ಮೂಲಕ ಗುರುವಾರ ಚಾಲನೆ ನೀಡಿ ಮಾತನಾಡಿದರು.
ನಾವು ವಾಸಿಸುವ ಪರಿಸರ ಶುದ್ಧವಾಗಿದೆಯೇ ಮತ್ತು ನಮ್ಮ ಭೂಮಿ ಭವಿಷ್ಯದ ಪೀಳಿಗೆಗೆ ಆರೋಗ್ಯಕರವಾಗಿ ಉಳಿದಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕಾಗಿದೆ. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮ ಭೂಮಿಯ ಆರೋಗ್ಯ ಕಾಪಾಡುವುದು, ಮಾಲಿನ್ಯ ತಡೆಯುವುದು, ಮರಗಳನ್ನು ಬೆಳೆಸುವ ಪರಿಸರ ಸ್ನೇಹಿ ಅಭ್ಯಾಸಗಳನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದರು.