

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ನೂತನ ದೃಷ್ಟಿಕೋನ ಬೆಳೆಸಿಕೊಳ್ಳುವುದರ ಜತೆಗೆ ನಮ್ಮ ಸಂಸ್ಕೃತಿ ಪ್ರೀತಿಸಿ ಗೌರವಿಸುವ ಗುಣ ಅಳವಡಿಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಹರ್ಷ ಡಂಬಳ ಹೇಳಿದರು.
ನಗರದ ಕೆ.ಇ. ಬೋರ್ಡಿನ ವಿದ್ಯಾರಣ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 2024-25ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆ.ಇ. ಬೋರ್ಡ್ ಸಂಸ್ಥೆ ಖಜಾಂಚಿ ಎನ್.ಎಸ್. ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಸತ್ವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ಓದಿಗಾಗಿ ಬಳಸಿಕೊಳ್ಳುವತ್ತ ಗಮನಹರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯಾಧ್ಯಕ್ಷ ಎಸ್.ಟಿ. ಪಾಟೀಲ ಮಾತನಾಡಿ, ಉತ್ತಮ ವಿದ್ಯಾಭ್ಯಾಸ ನಡೆಸಿ ಹೆಚ್ಚಿನ ಸಾಧನೆ ಮಾಡುವ ಮೂಲಕ ವಿದ್ಯಾಲಯದ ಗೌರವ ಹೆಚ್ಚಿಸಬೇಕು ಎಂದರು.
ಡಾ. ಶರಣಮ್ಮ ಗೊರೇಬಾಳ, ಡಾ. ಶ್ರೀಧರ ಉದಗಟ್ಟಿ, ಮಹೇಶ ಮಾಂಗ್, ಗುರುರಾಜ ಜಮಖಂಡಿ, ಡಾ.ಭರತ್ ನಾಯಕ, ಮಹೇಶ ಕುರುಬರ, ಇತರರು ಇದ್ದರು.
ಸವಿತಾ ಕುಸುಗಲ್ ನಿರೂಪಿಸಿದರು. ಶ್ವೇತಾ ನಾಯಕ್ ವಂದಿಸಿದರು.