

ಕಾರ್ಕಳ: ಗಾಂಧೀಜಿ ಸರಳ ವ್ಯಕ್ತಿತ್ವದೊಂದಿಗೆ ಅಹಿಂಸೆ, ಸತ್ಯ ಹಾಗೂ ಶಾಂತಿಯುತ ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಅವರ ಈ ಗುಣಗಳನ್ನು ಇಂದಿನ ಮಕ್ಕಳು ತಮ್ಮಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ದೇಶದ ಸೈನಿಕರಾಗಿ, ಸ್ವಚ್ಛತಾ ಸೇನಾನಿಗಳಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸವಾಜ ಸೇವಕ ಹಾಗೂ ಆಯುರ್ವೇದಿಕ್ ವೈದ್ಯ ಡಾ.ಶ್ರೀರಾಮ ಮೊಗೆರಾಯ ಹೇಳಿದರು.
ಕಾರ್ಕಳ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಲಾದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ವಾತನಾಡಿದರು.
ಡಾ.ಉದಯ ಕುವಾರ್ ಇರ್ವತ್ತೂರು ವಾತನಾಡಿ, ಗಾಂಧೀಜಿ ವಿದ್ಯಾರ್ಥಿಯಾಗಿದ್ದಾಗಲೇ ಸತ್ಯ, ಧರ್ಮ, ನ್ಯಾಯ, ನಿಷ್ಠೆಯ ಗುಣವನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು ಎಂದರು.
ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್ ಸದಸ್ಯ ಡಾ.ಪೀಟರ್ ರ್ನಾಂಡಿಸ್ ಅಧ್ಯಕ್ಷತೆ ವಹಿಸಿ, ವಾತಾನಾಡಿ, ಗಾಂಧೀಜಿ ಅವರ ಆದರ್ಶಗಳನ್ನು ಇಡೀ ಜಗತ್ತೇ ತನ್ನಲ್ಲಿ ಅಳವಡಿಸಿಕೊಂಡಿದೆ. ಸ್ವಚ್ಛ ಪರಿಸರದ ಜತೆಗೆ ಸ್ವಚ್ಛ ಮನಸ್ಸು ಕೂಡಾ ನಮ್ಮದಾಗಬೇಕು. ಸ್ವಚ್ಛ ಮನಸ್ಸಿನಿಂದ ಸ್ವಚ್ಛ ದೇಶ ನಿರ್ವಾಣವಾಗುತ್ತದೆ ಎಂದರು.
ಪ್ರಾಥಮಿಕ ವಿಭಾಗ ಮುಖ್ಯಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ ಪ್ರತಿಜ್ಞಾ ವಿಧಿ ಬೋಧಿಸಿದರು. ಪದವಿಪೂರ್ವ ವಿಭಾಗದ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾಮತ್, ಉಪಪ್ರಾಂಶುಪಾಲ ಡಾ.ಪ್ರಕಾಶ್ ಭಟ್, ಸಂಸ್ಥೆ ಆಡಳಿತಾಧಿಕಾರಿ ಕಿರಣ್ ಕ್ರಾಸ್ತ ಉಪಸ್ಥಿತರಿದ್ದರು. ಆಲಿಸ್ ಲೋಬೋ ಸ್ವಾಗತಿಸಿ, ನೀತಿ ಆಚಾರ್ಯ ನಿರೂಪಿಸಿದರು.