

ರಾಮದುರ್ಗ: ಬೆಳಗಾವಿ ಸುವರ್ಣಸೌಧ ಬಳಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ತಾಲೂಕಿನ ಲಿಂಗಾಯತ ಪಂಚಮಸಾಲಿ ಸಮುದಾಯದವರು ಗುರುವಾರ ತಾಲೂಕಿನ ಕೆ.ಚಂದರಗಿಯ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ತಡೆ ಹಿಡಿದು ಪ್ರತಿಭಟನೆ ನಡೆಸಿದರು.
ಲಾಠಿಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. ಹೋರಾಟಗಾರರ ಮೇಲೆ ದಾಖಲಿಸಿದ ಎಲ್ಲ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರದ 2ಎ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಶಿಾರಸು ಮಾಡಬೇಕು. ವಿಳಂಬ ಧೋರಣೆ ಅನುಸರಿಸಿದಲ್ಲಿ ರಾಜ್ಯಾದ್ಯಂತ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಚ್ಚರಿಕೆ ನೀಡಿದರು.
ಜನರಿಂದ ಗ್ರೇಡ್-2 ತಹಸೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ ಮನವಿ ಸ್ವೀಕರಿಸಿದರು. ಸಮುದಾಯದ ತಾಲೂಕಾಧ್ಯಕ್ಷ ಮಾರುತಿ ಕೊಪ್ಪದ, ಸಮುದಾಯದ ಮುಖಂಡರಾದ ಬಿ.ಎ್. ಬಸಿಡೋಣಿ, ವೈ.ಎಚ್. ಪಾಟೀಲ, ಪಿ.ಎ್. ಪಾಟೀಲ, ಪರುತಗೌಡ ಪಾಟೀಲ, ಸಿ.ಬಿ. ಪಾಟೀಲ, ಶಾಸನಗೌಡ ಪಾಟೀಲ, ಬಿ.ಎಂ. ಪಾಟೀಲ, ಜಿ.ವಿ. ನಾಡಗೌಡ್ರ, ಸಿದ್ದನಗೌಡ ಪಾಟೀಲ, ಶ್ರೀದೇವಿ ಮಾದನ್ನವರ, ಉಮೇಶ ಕೊಳವಿ, ಗೌಡಪ್ಪಗೌಡ ಪಾಟೀಲ, ಮಾರುತಿ ಮೇಟಿ, ನಿಂಗನೌಡ ಪಾಟೀಲ, ಸದಾಶಿವ ಹಳ್ಳದ, ಮುರಕಟ್ನಾಳ, ಶಂಕರ ಕತ್ತಿ ಇತರರಿದ್ದರು.
ಮುಖಂಡರ ಬಂಧನ-ಬಿಡುಗಡೆ: ಪ್ರತಿಭಟನಾಕಾರ ರಸ್ತೆ ಸಂಚಾರ ತಡೆಯು ಸಾರ್ವಜನಿಕರಿಗೆ ಅನನುಕೂಲವಾಗುತ್ತಿದ್ದನ್ನು ಗಮನಿಸಿದ ಸಿಪಿಐ ಐ.ಆರ್. ಪಟ್ಟಣಶೆಟ್ಟಿ ನೇತತ್ವದಲ್ಲಿ ಮುಖಂಡರನ್ನು ವಶಕ್ಕೆ ಪಡೆದು ಬಂಧಿಸಿ, ನಂತರ ಬಿಡುಗಡೆಗೊಳಿಸಲಾಯಿತು.