ವ್ಯವಹಾರ ಜ್ಞಾನ ಬೆಳೆಸಿಕೊಳ್ಳಲಿ

31Ckd2
Published on

ಚಿಕ್ಕೋಡಿ: ವಿದ್ಯಾರ್ಥಿಗಳು ವ್ಯವಹಾರದ ಬಗ್ಗೆ ತಿಳಿದುಕೊಳ್ಳಬೇಕು ಎಂದು ವ್ಯಾಪಾರಸ್ಥ ಸುಭಾಷ ಕಬಾಡಗಿ ಹೇಳಿದರು.

ಇಲ್ಲಿನ ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಮಾರುಕಟ್ಟೆ ದಿನ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಮಾರುಕಟ್ಟೆಯಲ್ಲಿ ತಂತ್ರಜ್ಞಾನದ ಮಹತ್ವ ಅರಿಯಬೇಕು. ಕೃಷಿ, ಕೈಗಾರಿಕೆ, ಸೇವಾವಲಯದ ಮಾರುಕಟ್ಟೆ ಬಗ್ಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಎಸ್.ಐ.ಬಿಸ್ಕೋಪ ಮಾತನಾಡಿ, ಅವಕಾಶಗಳನ್ನು ನಾವು ಬಳಸಿಕೊಳ್ಳಬೇಕು. ಜೀವನ ಎಂಬುವುದು ವ್ಯಾಪಾರ ಇದ್ದಂತೆ ಎಂದು ತಿಳಿಸಿದರು.

ವೈ.ಐ. ಜಮಾದಾರ, ಬಿ.ಡಿ.ರುಕಡೆ, ಡಿ.ಎಸ್. ಕೋಳಿ, ಐಶ್ವರ್ಯಾ ದೊಡಮನಿ, ನಮ್ರತಾ ಕುಮಾರಮಠ, ಸಾಕ್ಷಿ ಮನಗೂಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net