ಉಭಯ ಸರ್ಕಾರಗಳು ರೈತರ ಬೇಡಿಕೆ ಈಡೇರಿಸಲಿ

web4
ರಾಮದುರ್ಗ ತಹಸೀಲ್ದಾರ್‌ಗೆ ಕಬ್ಬು ಬೆಳಗಾರರ ಸಂಘದ ಮುಖಂಡರ ನೇತೃತ್ವದಲ್ಲಿ ರೈತರು ಮನವಿ ಸಲ್ಲಿಸಿದರು. ಸುರೇಶ ಮಲ್ಲನಗೌಡ ಪಾಟೀಲ, ಗುರುಸಿದ್ದಪ್ಪ ಕೋಟಗಿ, ಬಾಪುಗೌಡ ಪಾಟೀಲ, ಯಲ್ಲಪ್ಪ ಮನಿಹಾಳ, ಶಾಸಪ್ಪ ನಾವಿ, ಎಸ್.ಬಿ.ಮನಿಹಾಳ ಇತರರಿದ್ದರು.
Published on

ರಾಮದುರ್ಗ: ಉಭಯ ಸರ್ಕಾರಗಳು ರೈತರ ಬೇಡಿಕೆಗಳನ್ನು ಈಡೇರಿಸಲು ಹಿಂದೇಟು ಹಾಕುತ್ತಿವೆ ಎಂದು ಆರೋಪಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನೂರಾರು ರೈತರು ಪಟ್ಟಣದಲ್ಲಿ ಟ್ರಾೃಕ್ಟರ್ ರ‌್ಯಾಲಿ ನಡೆಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಬೆಳೆ ವಿಮೆ ನೀತಿ ಬದಲಾವಣೆ, ಎನ್‌ಡಿಆರ್‌ಎ್ ಮಾನದಂಡದ ಅಡಿಯಲ್ಲಿ ಅತಿವೃಷ್ಟಿ ಅನಾವೃಷ್ಟಿ ಬೆಳೆ ಪರಿಹಾರ ಹಂಚಿಕೆ, 60 ವರ್ಷ ಕೃಷಿ ಮಾಡಿದ ರೈತರಿಗೆ ವಿಶೇಷ ಪಿಂಚಣಿ ಸೌಲಭ್ಯ, ಸಂಸದರ ನಿಧಿಯಿಂದ ಕೆರೆಗಳ ತುಂಬುವಿಕೆ, ವಿಶ್ವ ವ್ಯಾಪಾರ ನೀತಿಯಿಂದ ಹೊರಬರುವುದು, ನಕಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟಗಾರರ ಮೇಲೆ ಸೂಕ್ತ ಕಾನೂನು ಜಾರಿ, ಕೃಷಿ ಉಪಕರಣಗಳ ಮೇಲಿನ ಜಿಎಸ್‌ಟಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ಹಾಲು ಉತ್ಪಾದಕರಿಗೆ ಬಾಕಿ ಇರುವ 800 ಕೋಟಿ ರೂ.ಪ್ರೋತ್ಸಾಹ ಧನ ವಿತರಣೆ ಮಾಡಬೇಕು. ಕಷಿ ಬಳಕೆಗೆ ಡೀಸೆಲ್ ಸಹಾಯಧನ ನೀಡುವುದು ಸೇರಿ ವಿವಿಧ ಬೇಡಿಕೆ ಶೀಘ್ರ ಈಡೇರಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಮೂಲಕ ಎಚ್ಚರಿಸಿದರು.

ಕಬ್ಬು ಬೆಳಗಾರರ ಸಂಘದ ಉಪಾಧ್ಯಕ್ಷ ಸುರೇಶ ಮಲ್ಲನಗೌಡ ಪಾಟೀಲ, ಜಿಲ್ಲಾಧ್ಯಕ್ಷ ಗುರುಸಿದ್ದಪ್ಪ ಕೋಟಗಿ, ಬಾಪುಗೌಡ ಪಾಟೀಲ, ಯಲ್ಲಪ್ಪ ಮನಿಹಾಳ, ಶಾಸಪ್ಪ ನಾವಿ, ಎಸ್.ಬಿ.ಮನಿಹಾಳ, ಎಂ.ಎಸ್.ಸುರೇಬಾನ, ಎಸ್.ಬಿ.ಸಿದ್ನಾಳ, ಸೈದುಸಾಬ ಬಾಗವಾನ, ಬಾಗಪ್ಪ ರಾಜನಾಳ, ಎಸ್.ಕೆ.ಪಾಟೀಲ, ಮಾರುತಿ ಪೂಜಾರ, ವಾಸಪ್ಪ ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net