

ಕಂಪ್ಲಿ: ಹಿಂದುಳಿದ ಅರ್ಹ ಸಮುದಾಯಗಳನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿಎಂ ಸಿದ್ಧರಾಮಯ್ಯ ಮುಂದಾಗಬೇಕು ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ತಳವಾರ ಒತ್ತಾಯಿಸಿದ್ದಾರೆ.
ಅರ್ಹ ಹಿಂದುಳಿದ ಸಮುದಾಯಗಳಾದ ಕುರುಬ, ಗೊಲ್ಲ, ಗಂಗಾಮತ, ಮಡಿವಾಳ, ಈಡಿಗ, ಉಪ್ಪಾರ, ನೇಕಾರ, ದೇವಾಂಗ, ಸವಿತಾ ಮತ್ತು ಅಲೆಮಾರಿ ಸಮುದಾಯಗಳು ಎಸ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕಿದೆ.
ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮತ್ತು ರಾಜಕೀಯವಾಗಿ ಮೂಲೆಗುಂಪಾಗಿರುವ ಧಮನಿತ ಸಮುದಾಯಗಳಿಗೆ ನ್ಯಾಯ ಸಿಗಬೇಕು. ಸ್ವಾತಂತ್ರ್ಯಲಭಿಸಿ 78ವರ್ಷಗಳಾದರೂ ಹಿಂದುಳಿದ ವರ್ಗಗಳಿಗೆ ಸೂಕ್ತ ಸಾಮಾಜಿಕ ನ್ಯಾಯ ದೊರಕದಿರುವುದು ವಿಪರ್ಯಾಸವಾಗಿದೆ.
ಸರ್ಕಾರ ಹಿಂದುಳಿದ ವರ್ಗಗಳ ಅರ್ಹ ಸಮುದಾಯಗಳನ್ನು ಎಸ್ಟಿಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಿ ತನ್ನ ಬದ್ಧತೆಯನ್ನು ತೋರಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.