ಶಾಲೆಗಳಿಗೆ ಸಂಘ ಸಂಸ್ಥೆಗಳು ನೆರವಾಗಲಿ

2 talaguppa 01
ತಾಳಗುಪ್ಪದ ನಾಲಂದ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ರಾಜನಂದಿನಿ ಕಾಗೋಡು ಮಾತನಾಡಿದರು. ಎಂ.ಹರನಾಥ ರಾವ್, ಎಂ.ರಾಜೇಶ್ವರಿ, ಎಸ್.ಗೌತಮ್, ಉಷಾ ರಮಣ, ಡಾ.ಮುರಿಗೆಪ್ಪ ಇತರರಿದ್ದರು.
Published on

ತಾಳಗುಪ್ಪ: ಶಾಲೆಗಳ ಅಭಿವೃದ್ಧಿಗೆ ಸಂಘ ಸಂಸ್ಥೆಗಳ ಕೊಡುಗೆ ಮಹತ್ವದ್ದು ಎಂದು ಸಾಗರ ರೋಟರಿ ಕ್ಲಬ್ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಹೇಳಿದರು. ನಾಲಂದ ಪ್ರೌಢಶಾಲೆಯಲ್ಲಿ ರೋಟರಿ ಚಾರಿಟಬಲ್ ಟ್ರಸ್ಟ್, ರೋಟರಿ ಕ್ಲಬ್ ಹಾಗೂ ಇನ್ನರ್‌ವ್ಹೀಲ್ ಕ್ಲಬ್ನಿಂದ ಶಾಲೆಗೆ ಪೀಠೋಪಕರಣ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಸರ್ಕಾರವೇ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದರೆ ಅದು ಕಷ್ಟದ ಕೆಲಸ, ಈ ಮಾದರಿಯಲ್ಲಿ ಸಂಸ್ಥೆಗಳು ಜವಾಬ್ದಾರಿ ವಹಿಸಿಕೊಂಡಲ್ಲಿ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದರು. ಮುಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಹರನಾಥ ರಾವ್ ಮಾತನಾಡಿ, ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ 60 ದಶಕದಲ್ಲಿ ಆರಂಭಿಸಿಲಾಯಿತು. ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಲವಾರು ಜನರು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಚಂದ್ರಯಾನ- 3ರಲ್ಲಿ ಇಲ್ಲಿ ಓದಿದ ವಿದ್ಯಾರ್ಥಿ ಎ.ಎನ್.ದಿನಕರ ಎನ್ನುವವರೂ ಇದ್ದರು ಎಂಬುದು ನಮ್ಮ ಹೆಮ್ಮೆ ಎಂದರು. ದಾನಿಗಳಾದ ಎಸ್.ಗೌತಮ್, ಡಾ.ಅರುಣಕುಮಾರ್, ವಿಶ್ರಾಂತ ಹಂಪಿ ಕುಲಪತಿ ಡಾ. ಮುರಿಗೆಪ್ಪ, ಅಶ್ವತ್ಥನಾರಾಯಣ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಉಷಾರಮಣ, ಮಹೇಶ್ ಅಂಕದ್, ಎಂ.ರಾಜೇಶ್ವರಿ, ರಾಜೀವ್, ಪಾಂಡುರಂಗ, ಎನ್.ಮಹೇಶ್ ಇತರರಿದ್ದರು. ರೋಟರಿಯಿಂದ 100 ಕುರ್ಚಿ, ಪ್ರೊಜೆಕ್ಟ್ರರ್, ಕಬ್ಬಿಣದ ಗೇಟ್, ಸ್ಟೀಲ್ ಪ್ಲೇಟ್ ಸೇರಿದಂತೆ ಒಟ್ಟು 1.25 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳನ್ನು ದಾನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net