ಮಕ್ಕಳಲ್ಲಿನ ಕಲೆ ಗುರುತಿಸುವ ಕೆಲಸವಾಗಲಿ

25 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳು ಸ್ವರ್ಗದಿಂದ ಬಂದ ಹೂಗಳಿದ್ದಂತೆ. ಹಳ್ಳಿಗಾಡಿನ ಮಕ್ಕಳಲ್ಲಿ ವಿವಿಧ ಕಲೆಗಳನ್ನು ಹೊರತರುವ ಕೆಲಸವನ್ನು ಸರ್ಕಾರ, ಶಿಕ್ಷಣ ಇಲಾಖೆ ಮಾಡಿದರೆ ಸಾಲದು. ಸಂಘ-ಸಂಸ್ಥೆಗಳು ಸಹ ಇಂತಹ ಕಾರ್ಯಕ್ಕೆ ಮುಂದಾಗಬೇಕು ಎಂದು ರಾಷ್ಟ್ರೀಯ ಶಿಕ್ಷಕರ ಫೆಡರೇಶನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ನಗರದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಚೇತನ ಪ್ರತಿಷ್ಠಾನ ಕರ್ನಾಟಕ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ, ಹಿರಿಯ ಕವಿಗಳಿಂದ ಮಕ್ಕಳಿಗಾಗಿ ಮುಕ್ತ ಕವಿಗೋಷ್ಠಿ, ಶಿಕ್ಷಣ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮತ್ತು ಉತ್ತಮ ಶಾಲೆ, ವಿಶ್ವಮಾನವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಚೇತನ ಪ್ರತಿಷ್ಠಾನದ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ ಮಾತನಾಡಿ, ಚಿಣ್ಣರ ಚಿಲಿಪಿಲಿ ವಿನೂತನ ಕಾರ್ಯಕ್ರಮ. ಮಕ್ಕಳಲ್ಲಿ ಹುದುಗಿರುವ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಅತ್ಯಂತ ಮುಖ್ಯ. ನಮ್ಮ ಸಂಸ್ಥೆ ಈ ಕೆಲಸದ ಜತೆಗೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಮಕ್ಕಳಿಗೆ ಸತ್ಕರಿಸುವ ಕೆಲಸ ಮಾಡುತ್ತಿದೆ ಎಂದರು.
ಶಿಕ್ಷಕ ಎಲ್.ಐ. ಲಕ್ಕಮ್ಮನವರ, ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಚರಂತಿಮಠ, ಪೀರಸಾಬ ನದಾಫ, ಪ್ರಕಾಶ ಗುಡಮನಿ, ಜ್ಯೋತಿ ಗೌರಿಮಠ ಮಾತನಾಡಿದರು. ಸುರೇಶ ಕೋರಕೊಪ್ಪ ಅಧ್ಯಕ್ಷತೆ ವಹಿಸಿದ್ದರು.
ಮಂಜುನಾಥ ಅಡಿವೇರ, ಮಂಜುಳಾ ಜ್ಯೋತಿ, ಎಂ.ಎಸ್. ಗಾಣಿಗೇರ, ಮಂಜುನಾಥ ಪವಾಡಿ, ರಾಜೇಶ್ವರಿ ಪವಾಡಿ, ಇತರರು ಇದ್ದರು. ಭಾಗ್ಯಶ್ರೀ ರಜಪೂತ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net