ಅಂಡರ್​ಪಾಸ್​, ಸ್ಕೈವಾಕ್​ ನಿರ್ಮಾಣವಾಗಲಿ

bidadi
Published on

ಬಿಡದಿ: ಬೆಂಗಳೂರು& ಮೈಸೂರು ಹೆದ್ದಾರಿಯ ಶೇಷಗಿರಿಹಳ್ಳಿ, ಲಕ್ಷಿ$್ಮಸಾಗರ ಗೇಟ್​ ಬಳಿ ಸಂಸದ ಡಾ.ಸಿ.ಎನ್​.ಮಂಜುನಾಥ್​ ಸಾರ್ವಜನಿಕರ ಸಮಸ್ಯೆ ಆಲಿಸಿದರು.

ಶೇಷಗಿರಿಹಳ್ಳಿ ಬಳಿ ಹೆದ್ದಾರಿಯಲ್ಲಿ ನಿರ್ಮಿಸಿರುವ ಅಂಡರ್​ ಪಾಸ್​ ಜನರ ಬಳಕೆಗೆ ಬಂದಿಲ್ಲ ಎಂದು ಸ್ಥಳಿಯರು ದೂರು ಸಲ್ಲಿಸಿದರು. ಹೆದ್ದಾರಿ ಕಾಮಗಾರಿ ವೇಳೆ ನಿರ್ಮಾಣ ಮಾಡಿದ್ದ ಅಂಡರ್​ ಪಾಸ್​ ಒಂದು ಕಡೆ ಓಪನ್​ ಇದ್ದು ಮತ್ತೊಂದು ಕಡೆ ಓಪನ್​ ಮಾಡದೆ ಹಾಗೆ ಬಿಟ್ಟಿದ್ದಾರೆ. ಹೆದ್ದಾರಿ ದಾಟಲು ಸುತ್ತಿ ಬಳಸಿ ಬರಬೇಕಾಗಿದೆ. ವಂಡರ್​ ಲಾ ಗೇಟ್​ ಬಳಿಗೆ ಹೋಗಿ ತಿರುವು ಪಡೆದು ಬರಬೇಕಾಗಿದೆ. ಅಂಡರ್​ ಪಾಸ್​ ಇದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ಸಂಸದರೆ ಖುದ್ದಾಗಿ ಮಂಗಳವಾರ ಅಂಡರ್​ಪಾಸ್​ ಸ್ಥಳ ವೀಣೆ ಮಾಡಿದರು. ಪಕ್ಕದ ಜಮೀನಿನಲ್ಲಿ ಜಾಗ ಖರೀದಿ ಮಾಡಿ ಹೊಸದಾಗಿ ಸರ್ವಿಸ್​ ರಸ್ತೆ ನಿರ್ಮಾಣ ಮಾಡಬೇಕಿದೆ ಎಂದು ಸ್ಥಳಿಯರು ಸಂಸದರ ಗಮನಕ್ಕೆ ತಂದರು.

ಸ್ಕೆವಾಕ್​ ನಿರ್ಮಾಣವಾಗಲಿ

ಇನ್ನು ಲಕ್ಷ್ಮೀಸಾಗರ ಗೇಟ್​ ಬಳಿ ಹೆದ್ದಾರಿ ದಾಟಲು ಸ್ಕೆ$ವಾಕ್​ ನಿರ್ಮಾಣ ಮಾಡಿಸಿಕೊಡುವಂತೆ ಸ್ಥಳಿಯರು ಮನವಿ ಮಾಡಿದರು. ಸ್ಕೈವಾಕ್​ ನಿರ್ಮಾಣದಿಂದ ಬೈರಗಿ ಕಾಲನಿ, ಹಂಪಾಪುರ, ಹೊಸದೊಡ್ಡಿ, ಲಕ್ಷ್ಮೀ ಸಾಗರಗ್ರಾಮಗಳು ಸೇರಿದಂತೆ ಇನ್ನು ಹಲವು ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಒಂದು ಕಡೆ ಬಸ್​ ಆಟೋ ಇಳಿದರೆ ರಸ್ತೆ ದಾಟಲು ಕಿಲೋಮೀಟರ್​ಗಟ್ಟಲೆ ಕಾಲ್ನಡಿಗೆಯಲ್ಲಿ ಸಾಗಬೇಕು. ಹಾಗಾಗಿ ಸ್ಕೆ$ವಾಕ್​ ನಿರ್ಮಾಣ ಮಾಡಿಸಿಕೊಡುವಂತೆ ಒತ್ತಾಯಿಸಿದರು. 

ಉತ್ತಮ ಸ್ಪಂದನೆ

ಶೇಷಗಿರಿಹಳ್ಳಿ ಬಳಿ ಅಂಡರ್​ ಪಾಸ್​ ಹಾಗೂಲಕ್ಷ್ಮೀ  ಸಾಗರ ಗೇಟ್​ ಬಳಿ ಸ್ಕೈವಾಕ್​ ನಿರ್ಮಾಣ ಕುರಿತ ಮನವಿಗೆ ಸ್ಪಂದಿಸಿದ ಸಂಸದರು, ಸ್ಥಳದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಿಡಿ ಅವರಿಗೆ ಕರೆ ಮಾಡಿ ತುರ್ತಾಗಿ ಈ ಎರಡು ಸ್ಥಳಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಬೇಕೆಂದು ತಾಕೀತು ಮಾಡಿದರು.

ಈ ವೇಳೆ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ರವಿಕುಮಾರ್​, ಆನಂದ, ಸತೀಶ್​, ಮುಖಂಡರಾದ ಶೇಷಪ್ಪ, ಶಿವಣ್ಣ, ನರಸಿಂಹಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net