ಸರ್ಕಾರಕ್ಕೆ ನಿಖರವಾದ ವರದಿ ಸಲ್ಲಿಸಲಿ

snd former
ಸಿಂಧನೂರಿನಲ್ಲಿ ಶಿರಸ್ತೇದಾರ್ ಶಿವಾನಂದ ಪೂಜಾರ್‌ಗೆ ರೈತ ಸಂಘ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ರಮೇಶ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು ಬೂದಿವಾಳಕ್ಯಾಂಪ್, ಟಿಯುಸಿಐ ಜಿಲ್ಲಾ ಅಧ್ಯಕ್ಷ ಬಿ.ಎನ್.ಯರದಿಹಾಳ ಇತರರಿದ್ದರು.
Published on

ಸಿಂಧನೂರು: ಬೆಳೆನಷ್ಟ ಅನುಭವಿಸಿದ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ನಿಧಿ ಅಡಿ ಮತ್ತು ಬೆಳೆ ವಿಮೆ ಯೋಜನೆ ಅಡಿ ಸೂಕ್ತ ಪರಿಹಾರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದ ತಾಲೂಕು ಘಟಕ ಶುಕ್ರವಾರ ತಾಲೂಕು ಆಡಳಿತಸೌಧ ಮುಂದೆ ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ಶಿವಾನಂದ ಪೂಜಾರ್‌ಗೆ ಮನವಿ ಸಲ್ಲಿಸಿತು.

ನಿರಂತರ ಮಳೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹತ್ತಿ, ತೊಗರಿ, ಸಜ್ಜೆ, ಸೂರ್ಯಕಾಂತಿ, ಹೆಸರು, ಅಲಸಂದಿ, ಜೋಳ, ಮೆಣಸಿನ ಕಾಯಿ, ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ತೋಟಗಾರಿಕೆ ಬೆಳೆಗಳು ಶೇ.60 ಹಾನಿಯಾಗಿವೆ. ಭತ್ತದ ಬೇರು ಕೊಳೆತು ಕೆಂಪು ರೋಗಕ್ಕೆ ತುತ್ತಾಗಿದೆ. ಮೇಕೆ, ಕುರಿ ಸೇರಿದಂತೆ ಇತರ ಜಾನುವಾರುಗಳು ವಿವಿಧ ರೋಗದಿಂದ ನರಳುತ್ತಿವೆ.

ಹೀಗಾಗಿ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಸರ್ಕಾರಕ್ಕೆ ನಿಖರವಾದ ವರದಿ ಸಲ್ಲಿಸಬೇಕು. ಮಾನವ ಶ್ರಮ ಒಳಗೊಂಡು ಉತ್ಪಾದನಾ ವೆಚ್ಚ ಮತ್ತು ಭೂ ಬಾಡಿಗೆ ಆಧರಿಸಿ ಬೆಳೆ ನಷ್ಟದ ಪರಿಹಾರ ಮೊತ್ತ ನಿಗದಿಪಡಿಸಬೇಕು. ಸ್ಥಳೀಯ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಖರೀದಿ ಕೇಂದ್ರ ತೆರೆಯಬೇಕು. ಸಜ್ಜೆ, ಸೂರ್ಯಕಾಂತಿ, ಹತ್ತಿಗೆ ಬೆಂಬಲ ಬೆಲೆ ಇದ್ದಾಗ್ಯೂ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಖರೀದಿಸಿ ರೈತರಿಗೆ ವಂಚಿಸುತ್ತಿರುವ ಖಾಸಗಿ ವ್ಯಾಪಾರಿಗಳ ವಿರುದ್ಧ ಕಾನೂ ನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಶಾಮೀದ್‌ಸಾಬ್ ಗುಂಜಳ್ಳಿಕ್ಯಾಂಪ್, ಮಹ್ಮದ್ ಯಾಸೀನ್, ವಿವೇಕಾನಂದ ಉದ್ಬಾಳ ಇ.ಜೆ, ಹನುಮೇಶ ಮುದ್ದಾಪುರ, ನವೀನ್‌ಕುಮಾರ ಮುದ್ದಾಪುರ, ಆಸೀಫ್ ಖಾನ್ ರಂಗಾಪುರ, ಛತ್ರಪ್ಪ ಗಾಣದಾಳ, ಕರೀಮ್‌ಸಾಬ್ ಉಪ್ಪಲದೊಡ್ಡಿ, ಉಮೇಶ್ ಉದ್ಬಾಳ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net