

|ಉಗರಗೋಳ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಜಗದ್ವಿಖ್ಯಾತಿ ಪಡೆದಿದೆ ಎಂದು ಯುವ ಧುರೀಣ ಅಶ್ವತ್ಥ ವೈದ್ಯ ಹೇಳಿದರು.
ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಮೂರ್ತಿ ಲೋಕಾರ್ಪಣೆ ಹಾಗೂ ಜಯಂತ್ಯುತ್ಸವದಲ್ಲಿ ಮಾತನಾಡಿದರು, ಮಹಾತ್ಮರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗಬೇಕು ಎಂದರು. ವಾಲ್ಮೀಕಿ ಸಮುದಾಯದ ಬೆಳಗಾವಿ ಜಿಲ್ಲಾಧ್ಯಕ್ಷ ರಾಜಶೇಖರ ತಳವಾರ ಮಾತನಾಡಿ, ಸಮುದಾಯದ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭಮೇಳ ಹಾಗೂ ಸಕಲ ವಾದ್ಯಮೇಳದೊಂದಿಗೆ ವಾಲ್ಮೀಕಿ ಮೂರ್ತಿ ಮೆರವಣಿಗೆ ಮಾಡಲಾಯಿತು. ಬ್ರಹ್ಮಾರೂಢಮಠದ ಬ್ರಹ್ಮಾರೂಢ ಸ್ವಾಮೀಜಿ, ನಿರ್ವಾಣೇಶ್ವರಮಠದ ಗುರು ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯ ಮಂಜುನಾಥ ಕಾಳಪ್ಪನವರ, ಉಪಾಧ್ಯೆ ರೇಣುಕಾ ಸಿದ್ದಕ್ಕನವರ, ರಾವೇಂದ್ರ ಪೂಜೇರ, ಪ್ರಕಾಶ ಲಮಾಣಿ, ಮೌನೇಶ ಗುಡಿಸಲಮನಿ, ಜಿ.ಎಲ್. ಹಳ್ಳಿಕೇರಿ, ಮಾರುತಿ ಶಿಂಧೆ, ಪಿಡಿಒ ರೇಣುಕಾ ನಾಡಗೌಡ್ರ, ಕುಮಾರ ತಡಹಾಳ, ರಮೇಶ ಕರಿಕಟ್ಟಿ, ಅಭಿಷೇಕ ತಿಪರಾಶಿ, ನಿಂಗಪ್ಪ ಸಂಬರಗಿ, ಪರಸಪ್ಪ ಇಮ್ರಾಪುರ ಇತರರು ಇದ್ದರು.