ಎಲ್ಲರೂ ಮಾತೃ ಭಾಷೆ ಪ್ರೀತಿಸಲಿ

5Athanigrameen2
Published on

ಅಥಣಿ ಗ್ರಾಮೀಣ: ಕನ್ನಡ ಭಾಷೆ ಕಲಿಯುವಂತೆ ಪಾಲಕರು ಮಕ್ಕಳನ್ನು ಪ್ರೇರೇಪಿಸಬೇಕು ಎಂದು ಉಮದಿ ಸರ್ವೋದಯ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಪ್ರಾಚಾರ್ಯೆ ಡಾ.ಸುರೇಖಾ ಹೊರ್ತಿಕರ ಹೇಳಿದರು.

ಮಹಾರಾಷ್ಟ್ರದ ಉಮರಾಣಿ ಗ್ರಾಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಉಮರಾಣಿ ಅಕ್ಕಮಹಾದೇವಿ ಜ್ಞಾನಯೋಗಾಶ್ರಮದ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಎಲ್ಲ ಭಾಷೆಗಳನ್ನು ಕಲಿಯವುದರ ಜತೆಗೆ ಕನ್ನಡ ಭಾಷೆ ಪ್ರೀತಿಸಬೇಕು. ಸಾಹಿತ್ಯ ಸಮ್ಮೇಳನಗಳು ಪಾಶ್ಚಾೃತ್ಯ ಸಂಸ್ಕೃತಿಯನ್ನು ಮೆಲಕು ಹಾಕುವಂತೆ ಮಾಡುತ್ತವೆ. ಉಮರಾಣಿ ಗ್ರಾಮ ಮಹಾರಾಷ್ಟ್ರದಲ್ಲಿದ್ದರೂ, ಕನ್ನಡದ ನೆಲವಾಗಿ ಮಾರ್ಪಟ್ಟಿದೆ. ಇತರರಿಗೆ ಕನ್ನಡ ಭಾಷೆ ಕಲಿಸುವ ಗಟ್ಟಿತನ ಒಳಗೊಂಡಿದೆ ಎಂದರು.

ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಅಪ್ಪಾಸಾಬ್ ಅಲಿಬಾದಿ ಮಾತನಾಡಿ, ಕನ್ನಡಿಗರನ್ನು ಬಡಿದೆಬ್ಬಿಸಲು ಸಾಹಿತ್ಯ ಸಮ್ಮೇಳನ ನಡೆಯಬೇಕು. ಕರ್ನಾಟಕದಲ್ಲಿ ಕನ್ನಡ ಕಲಿಕೆಯ ವ್ಯಾಮೋಹ ಕಡಿಮೆಯಾಗುತ್ತಿರುವ ಕುರಿತು ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಉಮರಾಣಿ ಜ್ಞಾನಯೋಗಾಶ್ರಮದ ಅಕ್ಕಮಹಾದೇವಿ ತಾಯಿ ಮಾತನಾಡಿದರು. ಧಾರವಾಡದ ಸರಸ್ವತಿ ತಾಯಿ ಕಾರ್ಯಕ್ರಮ ಉದ್ಘಾಟಿಸಿದರು.

ವಿವಿಧ ಕಲಾತಂಡಗಳಿಂದ ಕಲೆ ಪ್ರದರ್ಶನ ಜರುಗಿತು. ಮಲ್ಲೇಶ ಕಟ್ಟಿ, ಎಂ.ಜಿ.ಕಾರಾಜಣಗಿ, ಸಾಹಿತಿ ಶ್ರೀಶೈಲ ಅವಟಿ, ಅರ್ಜುನ ಕಾಂಬಳೆ, ಅರವಿಂದ ಕರಡಿ, ಚನ್ನಪ್ಪ ಸುತಾರ, ಮಾಣಿಕ ಬಡಿಗೇರ, ಮಲ್ಲಿಕಾರ್ಜುನ ಗದಗ, ಸಂತೋಷ ಗುಡಗೆ, ಸಂದೀಪ ಮಾಂಗ ಇತರರಿದ್ದರು. ಜಯಾನಂದ ತುಂಗಳ ಸ್ವಾಗತಿಸಿದರು. ಮೀನಾಕ್ಷಿ ಹತ್ತಿ ನಿರೂಪಿಸಿದರು. ಶರಣು ಜಾವೇದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net