ಛಾಯಾಗ್ರಾಹಕರಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲಿ

IMG20240821220539.jpg
Published on

ಬೆಳಗಾವಿ: ರಾಜ್ಯದಲ್ಲಿ ವೃತ್ತಿಪರರಾಗಿ ಕಾರ್ಯನಿರ್ವಹಿಸುವ ಛಾಯಾಗ್ರಾಹಕರ ಸಮಸ್ಯೆ ಪರಿಹಾರ ಹಾಗೂ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ಎಂ.ಬಿ.ಗೌಡರ ಹೇಳಿದರು.

ನಗರದ ಧರ್ಮನಾಥ ಭವನದಲ್ಲಿ ಬೆಳಗಾವಿ ಜಿಲ್ಲಾ ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್‌ಗಳ ಕ್ಷೇಮಾಭಿವೃದ್ಧಿ ಸಂಘ, ಕೈರೊಬ್, ಸೆಟ್ ಆ್ಯಂಡ್ ಪ್ರೇಮ್ಸ್ ಸಹಯೋಗದಡಿ ಸೋಮವಾರ ಆಯೋಜಿಸಿದ್ದ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೃತ್ತಿಪರ ಕೌಶಲಗಳ ತರಬೇತಿ ನೀಡುವ ಜತೆಗೆ ಹಿಂದುಳಿದ ಹಾಗೂ ಬಡ ಛಾಯಾಗ್ರಾಹಕರಿಗೆ ಅಗತ್ಯ ಸೌಕರ್ಯ ನೀಡಬೇಕು ಎಂದರು.

ಯಾವುದೇ ಕಾರ್ಯಕ್ರಮವಿರಲಿ ಛಾಯಾಚಿತ್ರ ಸೆರೆಹಿಡಿಯುವಾಗ ತಮ್ಮದೆ ಕೌಶಲ, ಆತ್ಮವಿಶ್ವಾಸ, ತಾಂತ್ರಿಕತೆ ಉಪಯೋಗಿಸಿ ದಾಗಲೇ ಇತರರಿಗಿಂತ ವಿಭಿನ್ನವಾಗಿ ಫೋಟೋ ಮೂಡಿಬರುತ್ತವೆ. ಆದರೆ, ತಾಂತ್ರಿಕ ಪರಿಣತಿ ಪಡೆಯಲು ಸರ್ಕಾರದಿಂದ ಈವರೆಗೂ ಯಾವುದೇ ಸವಲತ್ತು ನೀಡಿಲ್ಲ ಎಂದು ವಿಷಾದಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ಹಾಗೂ ಕೈರೊಬ, ಸೆಟ್ ಆ್ಯಂಡ್ ಪ್ರೇಮ್ಸ್ ಮಾಲೀಕ ಡಾ. ಮಂಜಿತ್ ಜೈನ್, ಮೋಹನ ಖಿಲಾರಿ ಇದ್ದರು. ಹಿರಿಯ ಛಾಯಾಗ್ರಹಕರಾದ ಶಿವಾನಂದ ಚೊಣ್ಣದ, ಸಚಿನ್ ಶಾಹಪುರಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಬಸವರಾಜ ರಾಮಣ್ಣವರ, ಸತೀಶ ಶೆಟ್ಟಿ, ನಾಮದೇವ ಕೋಳೆಕರ, ಬಾಬಾ ರಾಮಣ್ಣವರ, ರಾಜಾ ಕಟ್ಟಿ, ಜ್ಞಾನೇಶ ಓವುಳಕರ, ಸುನೀಲ ಸಾಳಸ್ಕರ್, ಅನ್ವರ್ ಬೇಗ್, ವಾಸು ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net