

ಕಾರ್ಕಳ: ಸವಾಜದಲ್ಲಿ ನಾವು ಗಳಿಸಿದ ಸಂಪತ್ತಿನ ಒಂದು ಅಂಶವನ್ನು ಸವಾಜಕ್ಕೆ ಅರ್ಪಣೆ ವಾಡಿ ನಮ್ಮ ಋಣವನ್ನು ತೀರಿಸಬೇಕು. ದಾನವನ್ನು ಕೊಡುವಾಗ ಒಳ್ಳೆಯ ಮನೋಭಾವದಿಂದ ನೀಡಬೇಕು ಎಂದು ಲೆಕ್ಕ ಪರಿಶೋಧಕ ಕಮಲಾಕ್ಷ ಕಾಮತ್ ಹೇಳಿದರು.
ಕಾರ್ಕಳ ಚೇತನಾ ವಿಶೇಷ ಶಾಲೆಯಲ್ಲಿ ಇತ್ತೀಚೆಗೆ ದಿ.ಕಾರ್ಕಳ ಮೀರಾ ಕಾಮತ್ ಸ್ಮರಣಾರ್ಥ ನಿರ್ಮಿಸಿದ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕಿ ಅಶ್ವಿನಿ ವಾತನಾಡಿ, ಸಂವಾದಾತ್ಮಕ ಕೊಠಡಿ ಭೋದನೆಯು ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದರು.
ಶಾಸಕ ಯಶ್‌ಪಾಲ್ ಸುವರ್ಣ, ಗೌರವಾಧ್ಯಕ್ಷ ಬಿ.ಗಣಪತಿ ಹೆಗ್ಡೆ, ಅಧ್ಯಕ್ಷ ಗಣಪತಿ ಪೈ, ರವ್ಯಾ ಸುಧೀಂದ್ರ, ದಿನೇಶ್ ಹೆಗ್ಡೆ, ಜಗದೀಶ್ ಅಂಚನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರುನಾಥ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೋಶಾಧಿಕಾರಿ ವಿಜಯ್‌ಕುವಾರ್ ವಂದಿಸಿದರು. ಶಿಕ್ಷಕಿ ಮಂಜುಳಾ ನಿರೂಪಿಸಿದರು.