

ಸಂಬರಗಿ: ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯು ರಾಷ್ಟ್ರ ಕಟ್ಟುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಉನ್ನತ ಕನಸು ಕಾಣಬೇಕು. ನನಸಾಗಿಸಲು ನಿರಂತರ ಶ್ರಮಿಸಬೇಕು ಎಂದು ಸಿಡಿಸಿ ಸದಸ್ಯ ಅಭಿಯಂತ ಅರುಣ ಯಲಗುದ್ರಿ ಹೇಳಿದರು.
ಖಿಳೇಗಾಂವ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಥಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸ್ವಯಂ ಸೇವಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ದೇಶ ಕಟ್ಟುವ ಸೇವೆ ಮಾಡುತ್ತಿರುವ ಅಥಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಎನ್‌ಎನ್‌ಎಸ್ ಶಿಬಿರದ ವಿದ್ಯಾರ್ಥಿಗಳ ಸೇವೆ ಶ್ಲಾಘನೀಯ ಎಂದರು.
ಮುರುಗೇಶ ಬಾನಿ ಮಾತನಾಡಿದರು. ಪ್ರೊ.ಸಂತೋಷ ಉಂಡಾಡಿ, ಪ್ರೊ.ಪ್ರವೀಣ ತುಬಚಿ, ಡಾ.ರಾವಸಾಬ ಅಂಬಿ, ಪ್ರೊ.ಸಿದ್ದಪ್ಪ ಕುಡ್ದಣ್ಣವರ, ಪ್ರೊ.ನಚಿಕೇತ ನೂಲಿ, ಧರೆಪ್ಪ ಪೂಜಾರಿ, ಕಿರಣ ಜಗಳಗಟ್ಟಿ, ಪ್ರೊ.ಶ್ರೀಶೈಲ ದೇವರಡ್ಡಿ ಇತರರಿದ್ದರು. ಸಂಯೋಜನಾಧಿಕಾರಿ ಡಾ.ಹರೀಶ ನಿರೂಪಿಸಿದರು. ಪ್ರೊ.ಸುರೇಖಾ ದೇವರಡ್ಡಿ ವಂದಿಸಿದರು.