ಎಡದಂಡೆ ನಾಲೆಗೆ 4,100 ಕ್ಯೂಸೆಕ್ ನೀರು ಹರಿಸಲಿ

Published on

ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ 4,100 ಕ್ಯೂಸೆಕ್ ನೀರು ಹರಿಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ ್ಪ ಮರಳಿ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಗಾರು ಹಂಗಾಮಿಗೂ ಮುನ್ನ ಮಳೆ ಅಧಿಕ ಪ್ರಮಾಣದಲ್ಲಿ ಸುರಿದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಲ್ಲಿ 79 ಟಿಎಂಸಿ ನೀರು ತುಂಬಿದೆ. ಒಳಹರಿವು ಇನ್ನೂ ಹೆಚ್ಚಿದೆ. ಐಸಿಸಿ ಸಭೆಯ ತೀರ್ಮಾನ ದಂತೆ 3 ಸಾವಿರ ಕ್ಯೂಸೆಕ್‌ನಂತೆ ಎಡದಂಡೆ ನಾಲೆಗೆ ನೀರು ಹರಿಸಲಾಗುತ್ತಿದೆ. ಇದರಿಂದ ರೈತರ ಜಮೀನುಗಳಿಗೆ ನೀರು ತಲುಪುವುದಿಲ್ಲ.

4,100 ಕ್ಯೂಸೆಕ್‌ನಂತೆ ನಾಲೆಗೆ ನೀರು ಹರಿಸಿ ಗೇಜ್ ಪ್ರಮಾಣ ಹೆಚ್ಚಿಸಿದರೆ ರೈತರ ಬಿತ್ತನೆ ಕಾರ್ಯದಿಂದ ಬೆಳೆ ಕಟಾವ್‌ವರೆಗೆ ಅನುಕೂಲವಾಗಲಿದೆ. ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ಹೊಸದಾಗಿ ಅಳವಡಿಸಲು ಗುಜರಾತ್ ಮೂಲದ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಬೇಸಿಗೆಯಲ್ಲಿಯೇ ಕ ್ರಸ್ಟ್‌ಗೇಟ್‌ಗಳನ್ನು ಅಳವಡಿಸಬೇಕಾಗಿತ್ತು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ರಾಮಯ್ಯ ಜವಳಗೇರಾ ಮಾತನಾಡಿ ದೇಶದಲ್ಲಿ ಪ್ರತಿವರ್ಷ 2 ಲಕ್ಷ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಪ್ರಥಮ, ಕರ್ನಾಟಕ ದ್ವಿತೀಯ ಸ್ಥಾನ, ವಿಶ್ವ ಮಟ್ಟದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

ಇದಕ್ಕೆ ಆಳುವ ಪ್ರಭುತ್ವಗಳ ದುರಾಡಳಿತ ಮತ್ತು ನಿರ್ಲಕ್ಷ್ಯವೇ ಕಾರಣ ಎಂದರು. ತಾಲೂಕು ಘಟಕದ ಅಧ್ಯಕ್ಷ ನಾಗಪ್ಪ ಬೂದಿವಾಳ, ಗೌರವ ಅಧ್ಯಕ್ಷ ಪರಯ್ಯಸ್ವಾಮಿ ಬೂದಿವಾಳ, ಮಸ್ಕಿ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ ರತ್ನಾಪುರ ಹಟ್ಟಿ, ಸದಸ್ಯ ರಾದ ವೀರರಾಜು ಬೂದಿವಾಳ ಕ್ಯಾಂಪ್, ನಾಗರಾಜ ಬೂದಿವಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net