ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಆತ್ಮಹತ್ಯೆಗೈದ ವಿದ್ಯಾರ್ಥಿ

hang
hang
Published on

ಕಾರ್ಕಳ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಡಿಮೆ ಅಂಕ ಲಭಿಸಿದೆ ಎಂದು ಮನಮೊಂದ ವಿದ್ಯಾರ್ಥಿಯೊಬ್ಬ ಕಾಬೆಟ್ಟು ಹವಾಲ್ದಾರ್‌ಬೆಟ್ಟುನಲ್ಲಿ ಆತ್ಮಹತ್ಯೆ ಗೈದಿದ್ದಾನೆ. ಹವಾಲ್ದಾರ್ ಬೆಟ್ಟು ಹಾಡಿಮನೆಯ ಅಗ್ನೀಶ್ ಕುಮಾರ್(16) ಜೀವತೆತ್ತ ವಿದ್ಯಾರ್ಥಿ. ಆಗಸ್ಟ್ 10ರ ಬೆಳಗ್ಗೆ 9.30ರಿಂದ 11.30ರ ಒಳಗಾಗಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ದೇವರ ಕೋಣೆಯ ಕಬ್ಬಿಣ ಹುಕ್‌ಗೆ ಬಟ್ಟೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net