ಶುಭಾರಂಭ ಮಾಡಿದ ‘ಪುನರ್ವಸು’ ಮಳೆ

UNTILETED
Published on

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಬುಧವಾರ ಸಂಜೆ ಉತ್ತಮ ಮಳೆಯಾಗಿದೆ. ಗುಡುಗು, ಮಿಂಚು, ಸಿಡಿಲಿನ ಆರ್ಭಟವಿಲ್ಲದೆ ಸುಮಾರು ಒಂದು ತಾಸಿನ ವರೆಗೆ ಸುರಿಯಿತು. ತೊಗರಿ, ಹೆಸರು ಇನ್ನಿತರ ಬಿತ್ತನೆ ಕೈಗೊಂಡು ಕಾದು ಕುಳಿತ್ತಿದ್ದ ರೈತಾಪಿ ವರ್ಗದ ಮೊಗದಲ್ಲಿ ಮಂದಹಾಸ ಮೂಡಿಸಿರುವ ಮಳೆ ಬಾಡುವ ಹಂತ ತಲುಪಿದ್ದ ಬೆಳೆಗಳಿಗೆ ಜೀವ ಕಳೆ ತಂದಿದೆ.

ಮೇ ತಿಂಗಳಲ್ಲಿ ಸುರಿದ ಮಳೆಗೆ ತಾಲೂಕಿನ ಬಹುತೇಕ ರೈತರು ಬಿತ್ತನೆ ಕೈಗೊಂಡಿದ್ದರು. ಅದಾದ ಬಳಿಕ ಮಳೆಯಾಗದೆ ರೈತರು ಆತಂಕದಲ್ಲಿರುವಂತಾಗಿತ್ತು. ಸದ್ಯ ಶುಭಾರಂಭ ಮಾಡಿರುವ ‘ಪುನರ್ವಸು’ ನಕ್ಷತ್ರದ ಮಳೆ ರೈತರ ನಿರೀಕ್ಷೆ ಗರಿಗೆದರುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net