ಡೆಂಘೆ ಹರಡದಂತೆ ಮುಂಜಾಗ್ರತೆ ವಹಿಸಿ

jagruthi
ಕುಷ್ಟಗಿ ತಾಲೂಕಿನ ಮೆಣಸಗೇರಾ ತಾಂಡಾ ನಿವಾಸಿಗಳಿಗೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಿಂದ ಸೊಳ್ಳೆ ಪರದೆ ಹಾಗೂ ಬತ್ತಿಗಳನ್ನು ಶುಕ್ರವಾರ ವಿತರಿಸಲಾಯಿತು. ನಿಡಶೇಸಿಯ ಚನ್ನಬಸವೇಶ್ವರ ಮಠದ ಅಭಿನವ ಕರಿಬಸವ ಶಿವಾಚಾರ್ಯರು, ಸಂಸ್ಥೆಯ ಜಿಲ್ಲಾ ನಿರ್ದೇಶಕ ಡಾ.ರವಿಕುಮಾರ ದಾನಿ, ತಾಲೂಕು ನಿರ್ದೇಶಕ ಡಾ.ಬಸವರಾಜ ವಸ್ತ್ರದ್ ಇತರರಿದ್ದರು.
Published on

ಕುಷ್ಟಗಿ: ವೈಯಕ್ತಿಕ ಆರೋಗ್ಯದ ಕಡೆ ಪ್ರತಿಯೊಬ್ಬರೂ ನಿಗಾ ವಹಿಸಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ನಿರ್ದೇಶಕ ಡಾ.ರವಿಕುಮಾರ ದಾನಿ ಹೇಳಿದರು.

ತಾಲೂಕಿನ ಮೆಣಸಗೇರಾ ತಾಂಡಾದಲ್ಲಿ ಡೆಂಘೆ ನಿಯಂತ್ರಣ ಸಂಬಂಧ ಅಲ್ಲಿನ ನಿವಾಸಿಗಳಿಗೆ ಸೊಳ್ಳೆ ಪರದೆ ಹಾಗೂ ಬತ್ತಿಗಳನ್ನು ವಿತರಿಸಿ ಶುಕ್ರವಾರ ಮಾತನಾಡಿದರು.

ಡೆಂಘೆ, ಮಲೇರಿಯಾದಂತಹ ಕಾಯಿಲೆಗಳು ಸೊಳ್ಳೆಗಳಿಂದ ಹರಡುತ್ತಿವೆ. ನಿರ್ಲಕ್ಷಿಸಿದರೆ ಮಾರಣಾಂತಿಕವಾಗಿ ಪರಿಣಮಿಸುತ್ತವೆ. ಜ್ವರದ ಲಕ್ಷಣಗಳು ಕಂಡುಬರುತ್ತಿದ್ದಂತೆಯೇ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಮನೆಯ ಆವರಣದಲ್ಲಿ ಹಾಗೂ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿಯಂತ್ರಕ ಬತ್ತಿಗಳನ್ನು ಹಚ್ಚಿ ಮುಂಜಾಗ್ರತೆ ವಹಿಸಬೇಕು ಎಂದರು.

ನಿಡಶೇಸಿಯ ಚನ್ನಬಸವೇಶ್ವರ ಮಠದ ಅಭಿನವ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ತಾಲೂಕು ನಿರ್ದೇಶಕ ಡಾ.ಬಸವರಾಜ ವಸ್ತ್ರದ್, ಪದಾಧಿಕಾರಿಗಳಾದ ಡಾ.ಮಂಜುನಾಥ ಗೊಂಡಬಾಳ, ಅಪ್ಪಣ್ಣ ನವಲೆ, ಮಲ್ಲಿಕಾರ್ಜುನ ಬಳಿಗಾರ, ಮಹಾಂತಯ್ಯ ಅರಳೆಲೆಮಠ, ಈರಣ್ಣ ಸೊಬರದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net