ಕುಷ್ಟಗಿ ಪುರಸಭೆಯಲ್ಲಿ ಸ್ವಚ್ಛತೆ ಮಾಯ

Published on

ಕುಷ್ಟಗಿ: ಪಟ್ಟಣದ ಪುರಸಭೆ ಕಚೇರಿ ಮುಖ್ಯಾಧಿಕಾರಿ ಕೊಠಡಿ ಪಕ್ಕದಲ್ಲಿರುವ ಶೌಚಗೃಹಗಳು ಗಬ್ಬು ನಾರುತ್ತಿದ್ದು, ಕಚೇರಿಗೆ ಬರುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವುದಲ್ಲದೆ ಅಲ್ಲಿನ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

ಕಚೇರಿಯ ಮಹಿಳೆಯರ ಬಳಕೆಗೆಂದು ಇರುವ ಶೌಚಗೃಹಗಳಲ್ಲಿ ತ್ಯಾಜ್ಯ ಮಡುಗಟ್ಟಿದ್ದು, ಇದರ ಮಧ್ಯೆ ಕಾಲಿಟ್ಟು ಹೋಗುವ ಪರಿಸ್ಥಿತಿ ಇದೆ. ದಿನದ ಬಹುಸಮಯ ಕಚೇರಿಯಲ್ಲಿಯೇ ಕಳೆಯುವ ಅಲ್ಲಿನ ಅಧಿಕಾರಿಗಳು ನಿರ್ವಹಣೆಗೆ ಕ್ರಮ ಕೈಗೊಳ್ಳದಿರುವುದು ಆಡಳಿತ ವೈಖರಿಗೆ ಕೈಗನ್ನಡಿಯಾಗಿದೆ.

ಪಟ್ಟಣದ ನೈರ್ಮಲ್ಯ ಕಾಪಾಡಿ ಜನರಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಬೇಕಿರುವ ಪುರಸಭೆ ಅಧಿಕಾರಿಗಳು, ಕಚೇರಿಯಲ್ಲಿನ ಅವ್ಯವಸ್ಥೆ ಸರಿಪಡಿಸದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಮೈಸೂರಿನಲ್ಲಿ ಮೀಟಿಂಗ್‌ನಲ್ಲಿರುವುದಾಗಿ ಹೇಳಿ ಜಾರಿಕೊಂಡರು.

ಹೊಸದಾಗಿ ಶೌಚಗೃಹ ನಿರ್ಮಿಸಲಾಗುತ್ತಿದೆ. ಕಚೇರಿ ಪಕ್ಕದಲ್ಲಿರುವ ಶೌಚಗೃಹಗಳು ಮಹಿಳಾ ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಮಹಿಳೆಯರು ತಾತ್ಕಾಲಿಕವಾಗಿ ಬಳಕೆ ಮಾಡುತ್ತಿದ್ದಾರೆ. ನಿರ್ವಹಣೆ ಮಾಡಲಾಗುತ್ತಿದೆ. ಪ್ರಾಣೇಶ ಪುರಸಭೆ ನೈರ್ಮಲ್ಯ ನಿರೀಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net