ಕುಷ್ಠ ರೋಗ ಪತ್ತೆ ಹಚ್ಚುವ ಅಭಿಯಾನಕ್ಕೆ ಚಾಲನೆ

JKD 13-2 KUSTA
ಜಮಖಂಡಿ ನಗರದ ರುದ್ರಸ್ವಾಮಿ ಪೇಟೆಯಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಜಿ.ಎಸ್. ಗಲಗಲಿ ರೋಗಿಗಳ ತಪಾಸಣೆ ನಡೆಸಿದರು.
Published on

ಜಮಖಂಡಿ: ನಗರದ ರುದ್ರಸ್ವಾಮಿ ಪೇಟೆಯಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಜಿ.ಎಸ್. ಗಲಗಲಿ ಬುಧವಾರ ಚಾಲನೆ ನೀಡಿದರು.

ಕುಷ್ಠರೋಗ ಅಭಿಯಾನ ನ. 21ರ ವರೆಗೆ ನಡೆಯಲಿದೆ. ಈ ಅಭಿಯಾನ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾರಂಭಗೊಂಡಿದ್ದು, ಜಮಖಂಡಿ ನಗರದಲ್ಲಿ ಒಟ್ಟು 90 ತಂಡಗಳನ್ನು ಮಾಡಿ 9 ಜನ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರ ಪ್ರದೇಶದಲ್ಲಿ ಕುಷ್ಠರೋಗದ ರೋಗಿಗಳ ಪತ್ತೆ ಮಾಡಲು ಮನೆ, ಮನೆಗೆ ತೆರಳಿ ಪತ್ತೆ ಮಾಡುತ್ತಾರೆ. ಅಂತಹವರು ಯಾರಾದರೂ ಕಂಡುಬಂದರೆ ಅವರಿಗೆ ಆರೋಗ್ಯ ಇಲಾಖೆಯಿಂದ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ಉಮೇಶ ಜೋಶಿ, ಮಲ್ಲು ಅಸ್ಕಿ, ವೈದ್ಯಾಧಿಕಾರಿ ವಿನಾಯಕ ಕಾರಜೋಳ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net