ಜ.30ರಿಂದ ಫೆ.13ರವರೆಗೆ ಕುಷ್ಠರೋಗದ ಜಾಗೃತಿ ಆಂದೋಲನ

bbmp office
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಗುರುವಾರದಿಂದ (ಜ.30) ಫೆ.13ರವರೆಗೆ ಕುಷ್ಠರೋಗದ ಕುರಿತು ಜಾಗೃತಿ ಆಂದೋಲನಕ್ಕೆ ಚಾಲನೆ ಸಿಗಲಿದ್ದು, ಪಾಲಿಕೆಯ 144 ಆರೋಗ್ಯ ಕೇಂದ್ರಗಳು, 5 ಸಾರ್ವಜನಿಕ ಆಸ್ಪತ್ರೆಗಳು, 8 ವ್ಯದ್ಯಕೀಯ ಕಾಲೇಜು/ಆಸ್ಪತ್ರೆಗಳು, 2 ಸ್ವಯಂಸೇವಾ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ.

2024-25ನೇ ಸಾಲಿನಲ್ಲಿ ಏ.1ರಲ್ಲಿ 319 ಎಂ.ಬಿ ಮತ್ತು 17 ಪಿ.ಬಿ ಸೇರಿ ಒಟ್ಟು 336 ಕುಷ್ಠರೋಗ ಪ್ರಕರಣಗಳು ದಾಖಲಾಗಿ ಬಹು ಔಷಧ ಚಿಕಿತ್ಸೆಗೆ ಒಳಪಟ್ಟಿರುತ್ತವೆ. ಪಿ.ಬಿ. ಪ್ರಕರಣವು 6 ತಿಂಗಳು ಮತ್ತು ಎಂ.ಬಿ. ಪ್ರಕರಣವು 12 ತಿಂಗಳು ಚಿಕಿತ್ಸೆಗೆ ಒಳಪಟ್ಟಲ್ಲಿ ಗುಣ ಮುಖವಾಗುತ್ತದೆ. 2019ರಿಂದ 2024 ರವರೆಗೆ 341 ಪ್ರಕರಣಗಳು ದಾಖಲಾಗಿದ್ದು, ಎಲ್ಲವೂ ಬಹು ಔಷಧ ಚಿಕಿತ್ಸೆಗೆ ಒಳಪಟ್ಟಿವೆ.

ಈ ಬಾರಿ ‘ಜಾಗೃತಿ ಮೂಡಿಸೋಣ, ತಪ್ಪು ಕಲ್ಪನೆಗಳನ್ನು ಹೋಗಲಾಡಿಸೋಣ ಮತ್ತು ಕುಷ್ಠರೋಗದಿಂದ ಯಾರೂ ಬಾಧಿತರಾಗದಂತೆ ನೋಡಿಕೊಳ್ಳೋಣ’ ಶೀರ್ಷಿಕೆಯಡಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಎಲ್ಲ ವೈದ್ಯರು ಹಾಗೂ ಪಾಲಿಕೆಯ ಸಿಬ್ಬಂದಿ ಕುಷ್ಠರೋಗಮುಕ್ತ ಪಾಲಿಕೆ ನಿರ್ಮಾಣದ ಪ್ರತಿಜ್ಙೆ ಸ್ವೀಕರಿಸಲಿದ್ದಾರೆ. ಈ ವೇಳೆ ಜನರನ್ನು ಸಂಪರ್ಕಿಸಿ, ರೋಗದ ಲಕ್ಷಣ ಹಾಗೂ ಚಿಕಿತ್ಸೆ ಕುರಿತು ಅರಿವು ಮೂಡಿಸಲಾಗುವುದು. ಇದೇ ವೇಳೆ ಕುಷ್ಠರೋಗ ಪತ್ತೆ ಕಾರ್ಯ ಕೂಡ ನಡೆಸಲಾಗುತ್ತದೆ ಎಂದು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ಸಿರಾಜುದ್ದೀನ್ ಮದನಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net